SUDDIKSHANA KANNADA NEWS/ DAVANAGERE/ DATE:25-10-2024
ದಾವಣಗೆರೆ: ಮಂಡ್ಯದಲ್ಲಿ ಡಿಸೇಂಬರ್ 20 ರಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸಲಿರುವ ಕನ್ನಡ ಜ್ಯೋತಿರಥ ಯಾತ್ರೆಯು ಹರಿಹರದಿಂದ ಹೊರಟು ಚನ್ನಗಿರಿಗೆ ಹೋಗುವ ಮಾರ್ಗದಲ್ಲಿ ಕುರ್ಕಿ ಗ್ರಾಮಕ್ಕೆ ಆಗಮಿಸಿದಾಗ ಕನ್ನಡ ಭುವನೇಶ್ವರಿ ಜ್ಯೋತಿ ರಥ ಯಾತ್ರೆಯನ್ನು ಕುರ್ಕಿ ಗ್ರಾಮ ಪಂಚಾಯಿತಿ, ಸರ್ಕಾರಿ ಪ್ರೌಢಶಾಲೆ ಕುರ್ಕಿ ಹಾಗೂ ಕುರ್ಕಿ ಗ್ರಾಮದ ಕನ್ನಡ ಅಭಿಮಾನಿಗಳು, ನಾಗರಿಕ ಬಂಧುಗಳು ಪುಷ್ಪಾರ್ಚನೆ ವಾದ್ಯ ಘೋಷಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ ಜಿ ಜಗದೀಶ್ ಕೂಲಂಬಿ ಮಾತನಾಡಿ ಕನ್ನಡ ಜ್ಯೋತಿ ರಥ ಯಾತ್ರೆಯು ನಮ್ಮ ನಾಡು, ನುಡಿ,ಸಂಸ್ಕೃತಿಯ ಪ್ರತೀಕವಾಗಿದೆ. ನಮ್ಮ ಕನ್ನಡ ಭಾಷೆ,ಸಾಹಿತ್ಯ ಸಂಸ್ಕೃತಿ ಶ್ರೀಮಂತವಾಗಿದೆ. ಕನ್ನಡ ಜ್ಯೋತಿ ರಥವು ಇಂದು ಕುರ್ಕಿ ಗ್ರಾಮಕ್ಕೆ ಆಗಮಿಸಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ತಿಳಿಸಿದರು.
ಕುರ್ಕಿ ಗ್ರಾಮದ ಹಿರಿಯರಾದ ಓದೋಗೌಡ್ರ ರೇವಣಸಿದ್ಧಪ್ಪನವರು ರಥ ಯಾತ್ರೆ ನಾಡಿನ ಉದ್ದಗಲಕ್ಕೂ ಯಶಸ್ವಿಯಾಗಿ ಸಂಚರಿಸಲಿ ಎಂದು ಶುಭ ಕೋರಿ ರಥ ಯಾತ್ರೆಯನ್ನು ಬೀಳ್ಕೊಟ್ಟರು.
ಕುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ, ಗ್ರಾಮದ ಮುಖಂಡರಾದ ಓದೋಗೌಡ್ರು ರೇವಣ್ಣಸಿದ್ದಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ ಜಿ ನಂದ್ಯಪ್ಪ , ಕುರ್ಕಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎ. ಎಂ. ಸಿದ್ದೇಶ್,
ಸಾಹಿತಿ ಸಿದ್ದೇಶ ಎಸ್. ಕುರ್ಕಿ, ಕೆ. ಎಸ್. ಅಜ್ಜಯ್ಯ, ಕಾಮನಹಳ್ಳೇರ ರವಿಕುಮಾರ್, ಅಂಗಡಿ ಮಹೇಶ್ವರಪ್ಪ, ಸಂಧಿಮನೆ ಸಿದ್ದೇಶ್, ಕೆ. ಜಿ. ಬಸವರಾಜಪ್ಪ, ಆಚಾರ್ ಮಂಜಣ್ಣ, ಮಲ್ಲಿಕಾರ್ಜುನ ಹೆಚ್ ಎಂ, ನಂದ್ಯಜ್ಜರ ಸಿದ್ದಣ್ಣ, ಹೆಚ್ ಆರ್
ವಿಜಯಕುಮಾರ್, ಹಾಲಿನ ಡೈರಿ ನಿರ್ದೇಶಕರು ನಂದ್ಯಾಜ್ಜರ ಮಲ್ಲಿಕಾರ್ಜುನ್, ಮಂಜುಳಾ, ಶೃತಿ,ಸರ್ಕಾರಿ ಪ್ರೌಢಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಕೆ ವಿ ಓಂಕಾರಪ್ಪ, ಸದಸ್ಯರಾದ ಕೆ ಜೆ ನಾಗರಾಜ್, ಹಾಗೂ ಕುರ್ಕಿ ಸರ್ಕಾರಿ ಪ್ರೌಢಶಾಲೆಯ
ಮುಖ್ಯ ಶಿಕ್ಷಕಿ ಕೆ. ಬಿ. ಮೀರಾ, ಶಿಕ್ಷಕರುಗಳಾದ ಪಾರ್ವತಮ್ಮ ಎಸ್, ಸಿ ಜಿ ಜಗದೀಶ್ ಕೂಲಂಬಿ, ಶಕುಂತಲಾ ಎಂವಿ, ಮಹಮ್ಮದ್ ರಫಿ, ಪ್ರಕಾಶ್ ಎಸ್,ಎಆರ್ ರಾಘವೇಂದ್ರ, ಎಂ ನಾಗರಾಜ್, ಹಾಗೂ ಕುರ್ಕಿ ಸರ್ಕಾರಿ ಪ್ರೌಢಶಾಲೆಯ ಎಲ್ಲಾ
ಮಕ್ಕಳು ಹಾಗೂ ಕನ್ನಡ ಅಭಿಮಾನಿಗಳು ಕನ್ನಡ ಧ್ವಜವನ್ನು ಹಿಡಿದು ತಾಯಿ ಕನ್ನಡ ಭುವನೇಶ್ವರಿಗೆ ಜಯ ಘೋಷ ಮೊಳಗಿಸುತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.