SUDDIKSHANA KANNADA NEWS/ DAVANAGERE/ DATE:04-03-2025
ಬೆಂಗಳೂರು: ಕನ್ನಡ ಸಿನಿಮಾ ಕಲಾವಿದರು ಅಂತರರಾಷ್ಟ್ರೀಯ ಚಲನಚಿತ್ಸೋತ್ಸವಕ್ಕೆ ಬಾರದ ಹಿನ್ನೆಲೆಯಲ್ಲಿ ಗರಂ ಆಗಿ ಡಿಸಿಎಂ ಡಿ. ಕೆ. ಶಿವಕುಮಾರ್ ಗುಡುಗಿದ್ದರು. ನಟ್ಟು, ಬೋಲ್ಟ್ ಎಲ್ಲಿ ಟೈಟ್ ಮಾಡಬೇಕೆಂದು ಗೊತ್ತಿದೆ ಎಂದು ಡಿಕೆಶಿ ಹೇಳಿದ್ದರು. ಇದಕ್ಕೆ ಕನ್ನಡ ಚಿತ್ರರಂಗದಲ್ಲಿ ಪರ – ವಿರೋಧ ಚರ್ಚೆ ಜೋರಾಗಿದೆ.
ಈ ನಡುವೆ ಸಂಸದೆ ಹಾಗೂ ಬಾಲಿವುಡ್ ತಾರೆ ಕಂಗಾನಾ ರಣವಾಂತ್ ಅವರು ಡಿಸಿಎಂ ಡಿ. ಕೆ. ಶಿವಕುಮಾರ್ ಗೆ ಸಖತ್ತಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲು ದುರ್ಗಾ ಪರಮೇಶ್ವರಿ ದೇವಿಯ ದರ್ಶನ ಪಡೆದ ಬಳಿಕ ಟಾಂಗ್ ಕೊಟ್ಟಿದ್ದಾರೆ.
ತುಳಿತಕ್ಕೊಳಗಾದವರ ರಕ್ಷಣೆಗೆ ವಿಷ್ಣು ಜನ್ಮ ತಾಳಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾರು ಏನು ಹೇಳಿದರೂ ಕಲಾವಿದರಿಗೆ ಏನೂ ಆಗಲ್ಲ ಎಂದು ಹೇಳುವ ಮೂಲಕ ಕನ್ನಡ ಚಿತ್ರರಂಗದ ಕಲಾವಿದರ ಪರವಾಗಿ ನಿಂತಿದ್ದಾರೆ.
ಸರಸ್ವತಿ ಯಾವಾಗಲೂ ಕಲಾವಿದರೊಂದಿಗೆ ಇರುತ್ತಾರೆ. ಮುಂದೆಯೂ ಇರುತ್ತಾಳೆ. ಕಲಾವಿದರೊಂದಿಗೆ ತಾಯಿ ಸರಸ್ವತಿ ಇದ್ದಾಳೆ ಎಂದು ಕಂಗಾನಾ ಹೇಳಿದ್ದಾರೆ.
ಕಟೀಲಿನಲ್ಲಿ ಮಾತಾಡಿ ಸಂಸದೆ ಕಂಗನಾ ರಣಾವತ್, ವೀರಾಧಿ ವೀರರೇ ಕಲಾಕಾರಾಗಿರುವ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇಂದ್ರ, ಅರ್ಜುನರು ಕಲಾವಿದರಾಗಿರುವ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಕಲಾವಿದರೊಂದಿಗೆ ತಾಯಿ ಸರಸ್ವತಿ ಇರುತ್ತಾಳೆ. ಕಲಾವಿರೊಂದಿಗೆ ದುರ್ವರ್ತನೆ ಸರಿಯಲ್ಲ. ಕಲಾವಿದರ ನಟ್ಟು ಬೋಲ್ಟ್ ಟೈಟ್ ಮಾಡಲು ಹೋಗಿ ಬೇರೆಯದ್ದೇ ಆಗಬಹುದು ಎಂದು ಕಂಗಾನಾ ಕಿಡಿಕಾರಿದರು.
ಡಿಸಿಎಂ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಡಿಕೆಶಿ ಪರವಾಗಿ, ಕೆಲವರು ವಿರುದ್ಧವಾಗಿ ಮಾತಾಡಿದ್ದು, ರಾಜ್ಯದಲ್ಲಿ ನಟ್ ಬೋಲ್ಟ್ ಟೈಟ್ ವಿಚಾರ ಭಾರೀ ಗದ್ದಲವನ್ನೇ
ಎಬ್ಬಿಸಿದೆ. ಬೆಂಗಳೂರು ಅಂತಾರಾಷ್ಟ್ರಿಯ ಸಿನಿಮೋತ್ಸವದ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಆಡಿದ್ದ ನಟ್ಟು ಬೋಲ್ಟ್ ಟೈಟ್ ಮಾಡ್ಬೇಕು ಎನ್ನುವ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಕಟೀಲು ದುರ್ಗಾ ಪರಮೇಶ್ವರಿ ದರ್ಶನ ಪಡೆಯಲು ಕರ್ನಾಟಕಕ್ಕೆ ಬಂದಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್, ರಾಜ್ಯದಲ್ಲಿ ಸದ್ದು ಮಾಡ್ತಿರುವ ನಟ್ಟು ಬೋಲ್ಟ್ ವಿವಾದದ ಬಗ್ಗೆ ಕೂಡ ಮಾತಾಡಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್
ಅವರಿಗೆ ಬಾಲಿವುಡ್ ಕ್ವೀನ್ ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ಬಾಲಿವುಡ್ ಮಂದಿಯೂ ಡಿಕೆಶಿ ನಟ್ಟು ಬೋಲ್ಟ್ ಟೈಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದು, ಮುಂದೆ ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.