ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭರ್ಜರಿ ಉದ್ಯೋಗಾವಕಾಶ: ದಾವಣಗೆರೆ ಜಿಲ್ಲೆಯಾದ್ಯಂತ ಸ್ವಯಂ ಸೇವಕ ಪುರುಷ ಗೃಹರಕ್ಷಕರ ಭರ್ತಿಗೆ ಅರ್ಜಿ ಆಹ್ವಾನ

On: April 23, 2025 6:49 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-23-04-2025

ದಾವಣಗೆರೆ ಜಿಲ್ಲೆಯಾದ್ಯಂತ ವಿವಿಧ ಘಟಕಗಳಲ್ಲಿ ಖಾಲಿ ಇರುವ 110 ಸ್ವಯಂ ಸೇವಕ ಪುರುಷ ಗೃಹರಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ಸಮಾದೇಷ್ಟರ ಕಛೇರಿ / ಘಟಕ ಕಛೇರಿಯಲ್ಲಿ ಅರ್ಜಿ ನಮೂನೆ ಪಡೆಯಲು ದಿನಾಂಕ: 24-04-2025 ರಿಂದ 14-05-2025ರ ವರೆಗೆ ಆಗಿರುತ್ತದೆ. ಭರ್ತಿಮಾಡಿರುವ ಅರ್ಜಿಗಳನ್ನು ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ: 16-05-202ರ ಆಗಿರುತ್ತದೆ.

ಜಿಲ್ಲಾ ಸಮಾದೇಷ್ಟರ ಕಛೇರಿ, ದೇವರಾಜ್ ಅರಸ್ ಬಡಾವಣೆ ಬಿ ಬ್ಲಾಕ್, ಶಿವಪಾರ್ವತಿ ಕಲ್ಯಾಣ ಮಂಟಪ ಪಕ್ಕ, ಶಿವಾಲಯ ಹಿಂಭಾಗ, ದಾವಣಗೆರೆ-577006 ಹಾಗೂ ತಾಲ್ಲೂಕು/ಉಪ ಘಟಕಗಳಲ್ಲಿಯೂ ಸಹ ಅರ್ಜಿಯನ್ನು ಪಡೆದು ಸಲ್ಲಿಸಬಹುದಾಗಿರುತ್ತದೆ. ಸಮಯ : ಬೆಳಗ್ಗೆ 10.30 ಗಂಟೆಯಿಂದ 1.30ರ ವರೆಗೆ ಮಾತ್ರ. ರಜಾ ದಿನಗಳನ್ನು ಹೊರತುಪಡಿಸಿ ವಿತರಿಸಲಾಗುವುದು.

ಖಾಲಿ ಹುದ್ದೆ, ಎಲ್ಲೆಲ್ಲಿ..? 

ಹರಿಹರ-19

ಮಲೇಬೆನ್ನೂರು-01

ಸಂತೇಬೆನ್ನೂರು- 6

ಹೊನ್ನಾಳಿ -07

ನ್ಯಾಮತಿ -14

ಚನ್ನಗಿರಿ -25

ಜಗಳೂರು-4

ಬಿಳಚೋಡು- 22

ಬಸವನಕೋಟೆ-12

ವಯಸ್ಸಿನ ಮಿತಿ:

19 ರಿಂದ 45 ವರ್ಷ ವಯೋಮಿತಿಯ ಕನಿಷ್ಟ 10ನೇ ತರಗತಿ ಪಾಸಾಗಿರುವ ಆರೋಗ್ಯವಂತ, ರಾಜಕೀಯ ಪಕ್ಷ-ಸಂಘ ಸಂಸ್ಥೆಗಳ ಸದಸ್ಯರು / ಕಾರ್ಯಕರ್ತರಾಗಿರಬಾರದು. ಕಾನೂನು ಮೊಕದ್ದಮೆಗಳಿಲ್ಲದವರು ಹಾಗೂ
ಸಂಬಂಧಪಟ್ಟ ಘಟಕಗಳಿಂದ 6 ಕಿ.ಮೀ ವ್ಯಾಪ್ತಿಯೊಳಗಿನ, ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಹಿಂದೆ ಗೃಹರಕ್ಷಕದಳ ಸಂಸ್ಥೆಯಿಂದ ಸೇವಾ ಸಮಾಲೋಪನೆಗೊಂಡವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ವಯೋಮಿತಿ: ಕನಿಷ್ಟ 19 ವರ್ಷ ಗರಿಷ್ಟ 45 ವರ್ಷ

ಉತ್ತಮ ದೇಹದಾರ್ಡ್ಯತೆ ಹೊಂದಿರಬೇಕು.

ಪುರುಷರಿಗೆ : ಎತ್ತರ 168 ಸೆಂ.ಮೀ. ತೂಕ- 50 ಕೆ.ಜಿ (ಕನಿಷ್ಠ)

ವಿದ್ಯಾರ್ಹತೆ:

10ನೇ ತರಗತಿ ಉತ್ತೀರ್ಣ

ಘಟಕ ಕಛೇರಿ ವ್ಯಾಪ್ತಿಯಲ್ಲಿನ ವಾಸ ಸ್ಥಳದ ಅಧಿಕೃತ ದಾಖಲೆ ಹೊಂದಿರಬೇಕು.

ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ.

ಘಟಕ ವ್ಯಾಪ್ತಿಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಹುದ್ದೆಯು ಖಾಯಂ ಆಗಿರುವುದಿಲ್ಲ. ಕರ್ತವ್ಯ ನಿರ್ವಹಿಸುವ ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ವಿಶೇಷ ಕೌಶ್ಯಲ್ಯತೆ ಇರುವವರಿಗೆ ಹೆಚ್ಚಿನ ಆಧ್ಯತೆ ಕೊಡಲಾಗುವುದು. ಎಲೆಕ್ನಿಷಿಯನ್,ಪೇಂಟರ್. ಕಂಪ್ಯೂಟರ್ ತರಬೇತಿ ಹೊಂದಿದ / ಇತರೆ ..) (ಚಾಲಕ,

ಅರ್ಜಿಯೊಂದಿಗೆ ಈ ಕೆಳಕಂಡ ದಾಖಲೆಗಳ ನಕಲು ಪ್ರತಿಗಳನ್ನು ದೃಡೀಕೃತ ಮಾಡಿಸಿ ಲಗತ್ತಿಸಬೇಕಾಗಿರುತ್ತದೆ :

ದಾಖಲಾತಿಗಳು ಏನು ಬೇಕು?

1. ಎಸ್.ಎಸ್.ಎಲ್.ಸಿ ಅಂಕಪಟ್ಟಿ

2. ಚುನಾವಣಾ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್

ಒ ಅಥವಾ ವೋಟರ್ ಐಡಿ

3. ವೈದ್ಯಕೀಯ ಪ್ರಮಾಣ ಪತ್ರ.

4. ನಿವಾಸಿ ದೃಢೀಕರಣ ಪತ್ರ

5. ಪಾಸ್ ಪೋರ್ಟ್ ಫೋಟೋ-01

6. ಸ್ವಯಂ ವಿಳಾಸದ ಅಂಚೆ ಕವರ್ ( ಎರಡು)

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment