• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Wednesday, June 18, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

ಹಲಸಿನ ಬೀಜ ಸೇವನೆಯಿಂದಲೂ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ?

Suddikshana Desk by Suddikshana Desk
August 21, 2024
in Home, ಬೆಂಗಳೂರು, ಹಾರ್ಟ್ ಬೀಟ್ಸ್- ಬದುಕು ಬೆಳಕು
0
ಹಲಸಿನ ಬೀಜ ಸೇವನೆಯಿಂದಲೂ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ?

ಹಲಸಿನ ಹಣ್ಣಿನ ತೊಳೆಗಳು ಬಾಯಲ್ಲಿ ನೀರು ತರಿಸುತ್ತವೆ. ತನ್ನ ಅಮೋಘವಾದ ಸುವಾಸನೆಯಿಂದ ಹಲಸಿನ ಹಣ್ಣು ಸುತ್ತಮುತ್ತಲಿನ ಪ್ರದೇಶಕ್ಕೆ ತನ್ನ ಪರಿಮಳವನ್ನು ಬೀರಿ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಈ ಎಲ್ಲಾ ಗುಣಗಳಿಂದ ಹಲಸಿನ ಹಣ್ಣು ತನ್ನ ಗಾತ್ರಕ್ಕೆ ತಕ್ಕಂತೆ ನನ್ನ ಹೆಸರು ಉಳಿಸಿಕೊಂಡಿದೆ. ಹಲಸಿನ ಹಣ್ಣಿನ ಬಗೆಗಿನ ಇಂತಹ ಹಲವಾರು ವಿಚಾರಗಳು ನಿಮಗೆ ಆಶ್ಚರ್ಯ ಉಂಟು ಮಾಡುತ್ತವೆ. ಈ ಲೇಖನದಲ್ಲಿ ಹಲಸಿನ ಹಣ್ಣಿನ ತೊಳೆಗಳನ್ನು ತಿಂದು ಬೇಡವೆಂದು ಬಿಸಾಡುವ ಬೀಜಗಳು ನಮಗೆ ಹೇಗೆ ಸಹಕಾರಿಯಾಗುತ್ತವೆ ಎಂಬುದನ್ನು ತಿಳಿಸಲಾಗಿದೆ. ಕೂದಲು ಉದುರುವುದು ಕಡಿಮೆಯಾಗುತ್ತೆ

ಕೆಲಸದ ಒತ್ತಡ, ಕಿರಿ ಕಿರಿಯಿಂದ ಕೂದಲು ಆರೈಕೆ ಮಾಡಲು ಆಗುವುದಿಲ್ಲ. ಇದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗಬಹುದು. ಆದರೆ ಈ ಸಮಸ್ಯೆಯನ್ನು ಹಲಸಿನ ಬೀಜಗಳನ್ನು ಸೇವನೆ ಮಾಡುವ ಮೂಲಕ ಬಗೆಹರಿಸಿಕೊಳ್ಳಬಹುದು. ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಇರುವುದರಿಂದ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ದೇಹದ ರಕ್ತ ಸಂಚಾರ ಸರಾಗವಾಗಿ ಆಗುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಹಲಸಿನ ಬೀಜಗಳಲ್ಲಿರುವ ಪ್ರೋಟೀನ್ ಅಂಶಗಳು ಮತ್ತು ಇನ್ನಿತರ ಪೌಷ್ಟಿಕ ಸತ್ವಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ. ಇದನ್ನು ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಕೂಡ ಬಳಸಲಾಗುತ್ತದೆ. ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ ದಂಪತಿ ಮಧ್ಯೆ ಒಡಕಿಗೆ ಲೈಂಗಿಕ ಆಸಕ್ತಿಯ ಕೊರತೆಯೂ ಕಾರಣವಾಗಬಹುದು. ಅಂತಹವರಿಗೆ ಹಲಸಿನ ಹಣ್ಣಿನ ಬೀಜಗಳು ಸಹಾಯ ಮಾಡುತ್ತವೆ. ಇದರಲ್ಲಿ ಕಂಡು ಬರುವ ಕಬ್ಬಿಣದ ಅಂಶ ಸಂಗಾತಿಗಳಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚು ಮಾಡುತ್ತದೆ. ಹಿಂದಿನ ಕಾಲದಲ್ಲಿ ಲೈಂಗಿಕ ಅಸ್ವಸ್ಥತೆಯ ಸಮಸ್ಯೆಗಳನ್ನು ದೂರ ಮಾಡಲು ಹಲಸಿನ ಬೀಜಗಳನ್ನು ಔಷಧಿಗಳನ್ನಾಗಿ ಬಳಸುತ್ತಿದ್ದರು ಎನ್ನಲಾಗುತ್ತದೆ. ಇದನ್ನು ಹುರಿದು ಅಥವಾ ನಿಮಗೆ ಬೇಕಾದ ರೀತಿಯಲ್ಲಿ ಸೇವನೆ ಮಾಡಬಹುದು.

ಜೀರ್ಣಶಕ್ತಿ ಉತ್ತಮವಾಗುತ್ತದೆ ಅಜೀರ್ಣತೆ, ಮಲಬದ್ಧತೆ ಸಮಸ್ಯೆಗಳಿದ್ದರೆ ಹಲಸಿನ ಹಣ್ಣಿನ ಬೀಜ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬೇಧಿ ಸಮಸ್ಯೆ ಇರುವವರು ಕೂಡ ಈ ಬೀಜಗಳನ್ನು ಬೇಯಿಸಿ ತಿನ್ನಬಹುದು. ದೇಹದ ಸದೃಢತೆಗೆ ಒಳ್ಳೆಯದು ಹಲಸಿನ ಹಣ್ಣಿನ ಬೀಜಗಳಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿರುವುದರಿಂದ ದೇಹದ ಸದೃಢತೆಗೆ ಇದು ಉತ್ತಮ ಆಹಾರವಾಗಿದೆ. ವ್ಯಾಯಾಮದ ನಂತರ ಹಲವು ಬಗೆಯ ಪ್ರೋಟಿನ್ ಅಂಶಗಳಿರುವ ಆಹಾರಗಳನ್ನು ಸೇವಿಸಲು ಬಯಸಿದರೆ ಹಲಸಿನ ಹಣ್ಣಿನ ಬೀಜಗಳು ಉತ್ತಮ ಆಯ್ಕೆಯಾಗಿದೆ. ಕಣ್ಣಿನ ಸಮಸ್ಯೆಯನ್ನು ನಿವಾರಿಸುತ್ತದೆ ದೃಷ್ಟಿ ದೋಷ, ಕಣ್ಣಿನ ಪೊರೆ, ಕಣ್ಣಿನಲ್ಲಿ ನೀರು ತುಂಬಿಕೊಳ್ಳುವುದು, ಇದ್ದಕ್ಕಿದ್ದಂತೆ ಕಣ್ಣು ಕೆಂಪಾಗುವುದು, ಕೆಲ ಸಮಯ ಕಣ್ಣು ಮಂಜಾಗುವುದು, ರಾತ್ರಿ ಕಣ್ಣು ಕಾಣದಿರುವುದು ಇತ್ಯಾದಿ ಸಮಸ್ಯೆಗಳಿಗೆ ಹಲಸಿನ ಬೀಜ ಪರಿಹಾರ ಒದಗಿಸಬಲ್ಲವು. ಇದರಲ್ಲಿ ವಿಟಮಿನ್ ‘ಎ’ ಅಂಶ ಹೆಚ್ಚಾಗಿದ್ದು, ಇಂತಹ ಸಮಸ್ಯೆಗೆ ಒಳ್ಳೆಯ ಪರಿಹಾರವಾಗಿದೆ.

Next Post
ಮಂಕಿಪಾಕ್ಸ್ ಸೋಂಕಿನ ಬಗ್ಗೆ ರಾಜ್ಯದ ಜನರು ಗಾಬರಿ, ಆತಂಕಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

ಮಂಕಿಪಾಕ್ಸ್ ಸೋಂಕಿನ ಬಗ್ಗೆ ರಾಜ್ಯದ ಜನರು ಗಾಬರಿ, ಆತಂಕಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

Leave a Reply Cancel reply

Your email address will not be published. Required fields are marked *

Recent Posts

  • ಮನೆಯ ವಾಸ್ತು ಶಾಸ್ತ್ರದ ನಿರ್ಮಾಣದ ಮಾಹಿತಿ
  • ನಿಮ್ಮ ಜಾತಕದಲ್ಲಿ ಯಾವ ದಶಾಭುಕ್ತಿ ಇದ್ದರೆ ಒಳ್ಳೆಯದು!
  • ಭದ್ರಾ ಜಲಾಶಯ ತುಂಬಲು ಇನ್ನು ಕೇವಲ 39.7 ಅಡಿ ಅಷ್ಟೇ ಬೇಕು!
  • ಏಕದಿನ ನಿವೃತ್ತಿಯ ನಂತರ ಫಾರ್ಮ್ ಗೆ ಮರಳಿದ ಮ್ಯಾಕ್ಸ್‌ವೆಲ್: ವಾಷಿಂಗ್ಟನ್ ಫ್ರೀಡಂಗೆ ಭಾರೀ ಗೆಲುವು
  • ಇಸ್ರೇಲ್ – ಇರಾನ್ ಸಂಘರ್ಷ: ಮಧ್ಯಪ್ರಾಚ್ಯದಲ್ಲಿ ಮತ್ತೊಂದು ನಷ್ಟ ಎದುರಿಸುವ ಭಯದಲ್ಲಿ ರಷ್ಯಾ!

Recent Comments

No comments to show.

Archives

  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಸಾಹಿತ್ಯ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In