SUDDIKSHANA KANNADA NEWS/ DAVANAGERE/ DATE:15-11-2024
ದಾವಣಗೆರೆ: ನಗರದ ಹಳೇ ಕುಂದುವಾಡ ಶಿಬಾರದಲ್ಲಿ ಶ್ರೀ ಮೈಲಾರಲಿಂಗೇಶ್ವರ ದೇವರ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ದೇವಸ್ಥಾನದ ಭಕ್ತ ಮುತ್ತುಲಿಂಗಪ್ಪರ ಎಂಡಿ ಬಸವರಾಜ್ ಹಾಗೂ ಕುಟುಂಬದವರು ಬೆಳ್ಳಿ ಮೂರ್ತಿ ಸಮರ್ಪಣೆ ಮಾಡಿದ್ದಾರೆ. ದೇವರ ಹರಕೆ ಹಿನ್ನಲೆ ಗೌರಿ ಹುಣ್ಣಿಮೆಯ ದಿನದಂದು ಬೆಳ್ಳಿ ಮೂರ್ತಿಯನ್ನು ಎಂಡಿ ಬಸವರಾಜ್ ದಂಪತಿಗಳು ಹಾಗೂ ಮುತ್ತುಲಿಂಗಪ್ಪರ ಕುಟುಂಬಸ್ಥರು ಮೈಲಾರ ದೇವಸ್ಥಾನ ಕಮಿಟಿಗೆ ಸಮರ್ಪಣೆ ಮಾಡಿದ್ದಾರೆ.
ಬಳಿಕ ಬೆಳ್ಳಿ ಮೂರ್ತಿ ಪ್ರತಿಷ್ಟಾಪನೆ ಮಾಡಿ ಡಮರುಗ, ದೋಣಿ ಸಮೇತ ಎಡೆ ಇರಿಸಿ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಗಿದೆ, ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆದಿದೆ.