SUDDIKSHANA KANNADA NEWS/ DAVANAGERE/ DATE:16-08-2024
ದಾವಣಗೆರೆ: ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಚಿಕಿತ್ಸಾ ಕೇಂದ್ರದ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪುತ್ತೂರು ಶಲ್ಯ ವೈದ್ಯ ಬಿ. ರಾಮರಾಜು ಅವರು ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ 3 ದಿನಗಳ ಉಚಿತ ತಪಾಸಣೆ ಮತ್ತು ಲಸಿಕಾ ಶಿಬಿರ ಆಯೋಜಿಸಿರುವುದು ಉತ್ತಮ ಕೆಲಸ. ಯೋಗ ಮತ್ತು ಪ್ರಕೃತಿಚಿಕಿತ್ಸೆಯ ಜೀವನಶೈಲಿಯನ್ನು ಅಳವಡಿಸಿಕೊಂಡು ರೋಗ ಮುಕ್ತ,ಆರೋಗ್ಯಯುತ ಸ್ವತಂತ್ರ ನಾಡನ್ನು ಕಟ್ಟೋಣವೆಂದು ಕರೆ ನೀಡಿದರು.
ಈ ದಿನ ನಮ್ಮೆಲ್ಲರ ಪಾಲಿಗೆ ಸದಾ ಸ್ಮರಣೀಯ. ಬಹಳಷ್ಟು ಮಹಾನ್ ನಾಯಕರ ಅವಿರತ ಪ್ರಯತ್ನ ಮತ್ತು ಶ್ರಮದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ನಮಗೆಲ್ಲರಿಗೂ ಸ್ವಾತಂತ್ರ್ಯ ತಂದುಕೊಟ್ಟು, ಇಂದಿನ ಶಾಂತಿ, ಅಭಿವೃದ್ದಿ – ಅಭ್ಯುದಯಕ್ಕೆ ಬುನಾದಿ ಹಾಕಿಕೊಟ್ಟ ಸ್ವಾತಂತ್ರ್ಯ ವೀರರ ಮೌಲ್ಯಗಳನ್ನು ನಾವಿಂದು ಎತ್ತಿಹಿಡಿಯಬೇಕಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವೈದ್ಯ ಡಾ. ಗಂಗಾಧರ ವರ್ಮ ಮಾತನಾಡಿ ಭಾರತವು ಬ್ರಿಟೀಷ್ ಆಡಳಿತದಿಂದ ಸ್ವತಂತ್ರಗೊಂಡ ದಿನವನ್ನ ನಾವಿಂದು ಆಚರಿಸುತ್ತಿದ್ದೇವೆ. ಈ ಸ್ವಾತಂತ್ರ್ಯವನ್ನು ಪಡೆಯಲು ಅದೆಷ್ಟೋ ನೇತಾರರು ತಮ್ಮ ಪ್ರಾಣವನ್ನೇ ಪಣಕ್ಕೆ ಇಟ್ಟರು. ಇಂದು ಅಂತಹ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ದಿನ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದು ಈ ದೇಶದ ಒಗ್ಗಟ್ಟನ್ನು ಕಾಪಾಡುವ ಮೂಲಕ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸೋಣ ಎಂದು ಕರೆ ನೀಡಿದರು.
ಸ್ವಾತಂತ್ರ್ಯ ದಿನವು ದೇಶದ ಸಾತಂತ್ರ್ಯವನ್ನು ಸಾರುವುದಾದರೆ, ಯೋಗ ಮತ್ತು ಪ್ರಕೃತಿಚಿಕಿತ್ಸೆ ಪದ್ದತಿಯು ವ್ಯಕ್ತಿಯ ದೇಹ ಮತ್ತು ಮನಸ್ಸಿನ ಸ್ವಾತಂತ್ರ್ಯದತ್ತ ಒತ್ತು ನೀಡುತ್ತದೆ, ಎರಡೂ ಚಿಂತನೆಗಳು ಸ್ವಾವಲಂಬನೆ ಮತ್ತು ನೈಸರ್ಗಿಕತೆಯ ಮಹತ್ವವನ್ನು ಹೊರ ಹಾಕುತ್ತವೆ. ಪ್ರತಿ ವ್ಯಕ್ತಿಯು ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಲು ಸ್ವಾತಂತ್ರ್ಯ ಮತ್ತು ಸ್ವತಂತ್ರತೆಯನ್ನು ಹೊಂದಿದ್ದಾರೆ ಎಂಬ ಆಲೋಚನೆ ಪ್ರಕೃತಿ ಚಿಕಿತ್ಸೆಯ ಮೂಲಭೂತ ಸಿದ್ಧಾಂತ ಎಂದು ತಿಳಿಸಿದರು.
ತಿಳಿಸಿದರು.
ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವೈದ್ಯೆ ತುಳಸಿ ರಾಮರಾಜು ಮಾತನಾಡಿ ಮೂರು ದಿನಗಳ ಕಾಲ ಸರ್ವರಿಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹಾ ಶಿಬಿರ ನಡೆಯುತ್ತಿದೆ. ಪ್ರತಿಯೊಬ್ಬರೂ ಇದರ ಸದುಪಯೋಗಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಈ ಸಂಧರ್ಭದಲ್ಲಿಆಸ್ಪತ್ರೆಯ ನಾಗಣ್ಣ, ಬಿಜ್ಜು, ಗಾಯತ್ರಿ, ಪ್ರಹ್ಲಾದ್ ಕೊಪ್ಪದ್ ಮತ್ತು ಸಾಧಕರು ಉಪಸ್ಥಿತರಿದ್ದರು.