SUDDIKSHANA KANNADA NEWS/ DAVANAGERE/ DATE:05-01-2025
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಐದನೇ ಟೆಸ್ಟ್ ನಲ್ಲಿ ಹೀನಾಯ ಸೋಲು ಅನುಭವಿಸುವ ಮೂಲಕ ಟೀಂ ಇಂಡಿಯಾ ಗವಾಸ್ಕರ್- ಬಾರ್ಡರ್ ಟೆಸ್ಟ್ ಸರಣಿ ಕಳೆದುಕೊಂಡಿತು.
ಬ್ಯಾಟಿಂಗ್ ಮುಂದುವರಿಸಿದ ಟೀಂ ಇಂಡಿಯಾ ಕೇವಲ 16 ರನ್ಗಳಿಗೆ ಕೊನೆಯ ನಾಲ್ಕು ವಿಕೆಟ್ಗಳನ್ನು ಭಾರತ ಕಳೆದುಕೊಂಡಿತು. 157 ರನ್ ಗೆ ಸರ್ವಪತನ ಕಂಡಿತು. ರವೀಂದ್ರ ಜಡೇಜಾ 26 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಪೆವಿಲಿಯನ್ ಪೆರೆಡ್ ನಡೆಸಿದರು. ಆಸೀಸ್ ಗೆ ಕೇವಲ 161 ರನ್ ಗಳ ಗುರಿ ನೀಡಿತು. ನಾಲ್ಕು ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ಗುರಿ ತಲುಪಿ ಪಂದ್ಯ ಗೆದ್ದಿತು. ಈ ಮೂಲಕ ಐದು ಟೆಸ್ಟ್ ಗಳ ಸರಣಿಯನ್ನು 2-1ರಿಂದ ಆಸೀಸ್ ವಶಪಡಿಸಿಕೊಂಡಿತು.
ಭಾರತದ ಸೋಲಿಗೆ ಪ್ರಮುಖ ಕಾರಣ ಜಸ್ಪ್ರೀತ್ ಬೂಮ್ರಾ ಗಾಯಗೊಡಿದ್ದು. ಸಿಡ್ನಿಯ ಅಂತಿಮ ಟೆಸ್ಟ್ ಪಂದ್ಯದ 3 ನೇ ದಿನದಂದು ಜಸ್ಪ್ರೀತ್ ಬುಮ್ರಾ ಇಲ್ಲದ ಭಾರತೀಯ ತಂಡವು ಆಸ್ಟ್ರೇಲಿಯಾವನ್ನು ನಿರ್ಬಂಧಿಸಲು ವಿಫಲವಾಯಿತು. ಭಾರತ 5 ನೇ ಟೆಸ್ಟ್ನಲ್ಲಿ 6 ವಿಕೆಟ್ಗಳಿಂದ ಸೋತಿತು. 10 ವರ್ಷಗಳ ನಂತರ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸೋತಿತು.
ಭಾರತವು ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ರಿಂದ ಬ್ಯಾಟ್ನೊಂದಿಗೆ ಹೆಚ್ಚಿನ ಹೋರಾಟವನ್ನು ನಿರೀಕ್ಷಿಸಿತ್ತು. ಆದ್ರೆ, ರನ್ ಗಳಿಸಲು ಪರದಾಡಿದರು. ಪ್ರಸಿದ್ಧ್ ಕೃಷ್ಣ, ಸಿರಾಜ್ ಅಹ್ಮದ್ ಬೌಲಿಂಗ್ ಅಷ್ಟೇನೂ ಮಾರಕ ಆಗಲಿಲ್ಲ. ಒಟ್ಟಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಹೀನಾಯ ಸೋತ ಭಾರತಕ್ಕೆ ಮುಖಭಂಗ ಆಗಿದ್ದಂತೂ ನಿಜ.