SUDDIKSHANA KANNADA NEWS/ DAVANAGERE/ DATE:05-01-2024
ದಾವಣಗೆರೆ: ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ ಸೇರಿದಂತೆ 50ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ರಾಜ್ಯ ಸರ್ಕಾರ ಬಂಧಿಸಿರುವ ಕ್ರಮ ಖಂಡಿಸಿ ಹಾಗೂ ತಕ್ಷಣ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕವು ರಕ್ತದಲ್ಲಿ ಪತ್ರ ಚಳವಳಿ ನಡೆಸಿತು.
ಅಕ್ಕಮಹಾದೇವಿ ರಸ್ತೆಯಲ್ಲಿರುವ ಗುರುಭವನದಲ್ಲಿ ಕರವೇ ಕಾರ್ಯಕರ್ತರಿಂದ ರಕ್ತದಲ್ಲಿ ನಾರಾಯಣಗೌಡ ರವರನ್ನ ತಕ್ಷಣ ಬಿಡುಗಡೆಗೊಳಿಸಬೇಕೆಂದು ಬರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೋಸ್ಟ್ ಮೂಲಕ ಕಳಿಸಲಾಯಿತು.
ಜಿಲ್ಲಾಧ್ಯಕ್ಷ ಕರವೇ ರಾಮೇಗೌಡ ಮಾತನಾಡಿ, ಕನ್ನಡದ ಭಾಷೆಯ ಉಳಿಯಬೇಕು. ರಾಜ್ಯದ ಅಸ್ಮಿತೆಗಾಗಿ ಬೆಂಗಳೂರಿನಲ್ಲಿ ಬೆಂಗಳೂರಿನ ಅಂಗಡಿ ಮುಗ್ಗಟ್ಟುಗಳು, ಮಾಲ್ ಗಳು ಸಂಪೂರ್ಣ ಆಂಗ್ಲ ಭಾಷೆಯಲ್ಲಿ ನಾಮಫಲಕ ಬರೆಸಿ, ಕನ್ನಡಿಗರಿಗೆ ಉದ್ಯೋಗ ಕೊಡದೇ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದವು. ಇದರ ವಿರುದ್ಧ ಸಮರ ಸಾರಿದ ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡರು, ಕಳೆದ ತಿಂಗಳು 27ರಂದು ಕನ್ನಡ ಜಾಗೃತಿ ಅಭಿಯಾನ ಪ್ರಾರಂಭಿಸಿದರು. ಆದರೆ ಸರ್ಕಾರ ಅನುಮತಿ ಕೊಟ್ಟು ಪೋಲಿಸ್ ಇಲಾಖೆ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿಕೊಟ್ಟು ಸರ್ಕಾರ ಮಾಡುವ ಕೆಲಸ ಕರ್ನಾಟಕ ರಕ್ಷಣಾ ವೇದಿಕೆ ಮಾಡಿದೆ. ಇದರ ಅರಿವಿದ್ದರೂ ಸಹ ನಾಳೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ನಾರಾಯಣ ಗೌಡರನ್ನ ಬಂಧಿಸಿ ಇಂದಿಗೆ 9 ದಿನ ಕಳೆದಿದೆ. ಸರ್ಕಾರ ಕುಂಟು ನೆಪ ಹೇಳುತ್ತಿರುವುದು ಸರಿಯಲ್ಲ ಎಂದರು.
ಈಗಲಾದರೂ ರೈತಪರ, ಕನ್ನಡ ಹೋರಾಟಗಾರರ ಎಲ್ಲಾ ಕೇಸ್ ಗಳನ್ನು ವಾಪಸ್ ಪಡೆಯಬೇಕು. ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಶೇಕಡ 60ರಷ್ಟು ನಾಮಫಲಕ ಕನ್ನಡದಲ್ಲಿಯೇ ಇರಬೇಕು. ಎಲ್ಲಾ ನಾಮಫಲಕಗಳು, ಜಾಹೀರಾತು ಫಲಕಗಳು, ಪೆಟ್ರೋಲ್ ಬಂಕ್ ನಾಮಫಲಕಗಳು, ಶಾಲಾ ಕಾಲೇಜು ಸಂಸ್ಥೆಗಳ ನಾಮಫಲಕಗಳು ಆಂಗ್ಲ ಭಾಷೆಯಲ್ಲಿ ಇರಬಾರದು. ಮಹಾನಗರ ಪಾಲಿಕೆ ಆಯುಕ್ತರು, ಪುರಸಭೆ ಆಯುಕ್ತರು, ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಆದೇಶದಂತೆ ಅರವತ್ತು ನಲವತ್ತು ಅನುಪಾತ ಅಡಿಯಲ್ಲಿ ಕನ್ನಡದಲ್ಲಿ ನಾಮಫಲಕ ಶೇಕಡಾ 60 ರಷ್ಟು ಇರಬೇಕೆಂದು ದಾವಣಗೆರೆ ಜಿಲ್ಲಾಧಿಕಾರಿಗಳು ಆದೇಶ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗೋಪಾಲ್ ದೇವರಮನಿ, ತನ್ವೀರ್, ಜಬಿವುಲ್ಲಾ, ಆಟೋ ರಫೀಕ್, ಜಿ. ಎಸ್. ಸಂತೋಷ್, ಸುರೇಶ್, ಗುರುಮೂರ್ತಿ, ಸಂಜು , ದಾದಾಪೀರ್, ರವಿಕುಮಾರ, ಖಾದರ್ ಬಾಷಾ, ಅನ್ವರ್, ಪರಮೇಶ್, ಅಭಿ, ಧೀರೇಂದ್ರ, ತುಳಸಿ ರಾಮ್, ರಾಜೇಶ್, ಸಾಧಿಕ್, ಮಂಜುಳಾ ಮತ್ತಿತರರು ಪಾಲ್ಗೊಂಡಿದ್ದರು.






