SUDDIKSHANA KANNADA NEWS/ DAVANAGERE/ DATE:04-04-2025
ನವದೆಹಲಿ: ಸಂಸತ್ತಿನ ಎರಡೂ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಿರುವುದು ಸಂತಸ ತಂದಿದೆ. ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಸಮಗ್ರ ಬೆಳವಣಿಗೆಗಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದ್ದು ಮಹತ್ವದ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಇದು ವಿಶೇಷವಾಗಿ ದೀರ್ಘಕಾಲದಿಂದ ಅಂಚಿನಲ್ಲಿ ಉಳಿದು, ಧ್ವನಿ ಮತ್ತು ಅವಕಾಶ ಎರಡನ್ನೂ ನಿರಾಕರಿಸಲ್ಪಟ್ಟವರಿಗೆ ಸಹಾಯ ಆಗಲಿದೆ ಎಂದು ಪ್ರತಿಪಾದಿಸಿದ್ದಾರೆ.
ಎಕ್ಸ್ ಪೋಸ್ಟ್ಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ದಶಕಗಳಿಂದ ವಕ್ಫ್ ವ್ಯವಸ್ಥೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ ಎದುರಿಸುತಿತ್ತು. ವಿಶೇಷವಾಗಿ ಮುಸ್ಲಿಂ ಮಹಿಳೆಯರು, ಬಡ ಮುಸ್ಲಿಮರು ಮತ್ತು ಪಸ್ಮಾಂಡ ಮುಸ್ಲಿಮರ ಹಿತಾಸಕ್ತಿಗಳಿಗೆ ಹಾನಿ ಮಾಡುತಿತ್ತು. ಇದನ್ನು ನಾವು ತಪ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸಂಸತ್ತು ಅಂಗೀಕರಿಸಿದ ಶಾಸನಗಳು ಪಾರದರ್ಶಕತೆ ಜೊತೆಗೆ ಜನರ ಹಕ್ಕುಗಳನ್ನು ರಕ್ಷಿಸುತ್ತವೆ.ಭಾರತವು ಈಗ ಚೌಕಟ್ಟು ಹೆಚ್ಚು ಆಧುನಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ಸೂಕ್ಷ್ಮವಾಗಿರುವ ಯುಗವನ್ನು ಪ್ರವೇಶಿಸಲಿದೆ ಎಂದು ಪ್ರಧಾನಿ
ಮೋದಿ ಬಣ್ಣಿಸಿದ್ದಾರೆ.
ಸಂಸದೀಯ ಮತ್ತು ಸಮಿತಿ ಚರ್ಚೆಗಳಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲಾ ಸಂಸತ್ ಸದಸ್ಯರು, ಸಂಸದೀಯ ಸಮಿತಿಗೆ ತಮ್ಮ ಅಮೂಲ್ಯವಾದ ಸಲಹೆ ನೀಡಿದ ಕಳುಹಿಸಿದ ಅಸಂಖ್ಯಾತ ಜನರಿಗೆ ಅವರು ವಿಶೇಷ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. “ಮತ್ತೊಮ್ಮೆ, ವ್ಯಾಪಕ ಚರ್ಚೆ ಮತ್ತು ಸಂವಾದದ ಮಹತ್ವವನ್ನು ಮತ್ತೊಮ್ಮೆ ದೃಢೀಕರಿಸಲಾಗಿದೆ” ಎಂದು ಅವರು ಹೇಳಿದರು.
ಲೋಕಸಭೆಯು ವಿವಾದಾತ್ಮಕ ಕರಡು ಕಾನೂನನ್ನು ಅಂಗೀಕರಿಸಿದ ಒಂದು ದಿನದ ನಂತರ, ರಾಜ್ಯಸಭೆಯು ನಿನ್ನೆ ರಾತ್ರಿ ಮಸೂದೆಯನ್ನು ಅಂಗೀಕರಿಸಿತು. ಒಗ್ಗಟ್ಟಿನ ವಿರೋಧ ಪಕ್ಷದಿಂದ ತೀವ್ರವಾಗಿ ವಿರೋಧಿಸಲ್ಪಟ್ಟ ವಿವಾದಾತ್ಮಕ ಕರಡು
ಕಾನೂನನ್ನು ಲೋಕಸಭೆಯು ಅಂಗೀಕರಿಸಿತು.