SUDDIKSHANA KANNADA NEWS/ DAVANAGERE/ DATE:08-03-2025
ದಾವಣಗೆರೆ: ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ‘ಡ್ರಗ್ಸ್ ಮುಕ್ತ ದಾವಣಗೆರೆ’ ‘ಸೈಬರ್ ಸೇಫ್ ಸಿಟಿ’ ‘112 ಸಹಾಯವಾಣಿ’ ‘ಸಂಚಾರ ನಿಯಮಗಳ ಕಡ್ಡಾಯ ಪಾಲನೆ’, ‘ಫಿಟ್ ನೆಸ್ ಫಾರ್ ಆಲ್’. ‘ಮಹಿಳಾ ಸುರಕ್ಷತೆ’ ಅಭಿಯಾನ ಎಂಬ ಘೋಷಣೆ ಅಡಿಯಲ್ಲಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಮಾರ್ಚ್ 9ಕ್ಕೆ ನಗರದಲ್ಲಿ 2 ನೇ ಬಾರಿಗೆ “10ಕೆ ಮೆರಾಥಾನ್ ಹಾಗೂ 5ಕೆ ಮೆರಾಥಾನ್ ಪೊಲೀಸರೊಂದಿಗೆ ಓಟ” ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಮೆರಾಥಾನ್ ಓಟದ ಸ್ಪರ್ಧೆಯಲ್ಲಿ ಪೊಲೀಸರೊಂದಿಗೆ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಯುವಕ,ಯುವತಿಯರು, ಕ್ರೀಡಾಪಟುಗಳು (ಪುರುಷ ಮತ್ತು ಮಹಿಳೆ) ಹಾಗೂ ಜಿಲ್ಲೆಯ ನಾಗರೀಕರು ಸಹ ಸ್ವ-ಹಿತಾಸಕ್ತಿಯಿಂದ ಪಾಲ್ಗೋಳಲು
ಅವಕಾಶವಿರುತ್ತದೆ
ದಾವಣಗೆರೆ ನಗರದಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಾ. 9ರಂದು ಬೆಳಿಗ್ಗೆ 7 ಗಂಟೆಗೆ “10ಕೆ ಮೆರಾಥಾನ್ ಹಾಗೂ 5ಕೆ ಮೆರಾಥಾನ್ ಪೊಲೀಸರೊಂದಿಗೆ ಓಟ ಸ್ಪರ್ಧೆ” ಗೆ ಚಾಲನೆ ನೀಡಲಾಗುವುದು.
ವಿಜೇತರಿಗೆ ಬಹುಮಾನ:
10000 ಮೀ ಮ್ಯಾರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊದಲ 3 ಸ್ಪರ್ದೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಅಂದರೆ- ಮೊದಲ ಬಹುಮಾನ 20,000 ರೂ., ಎರಡನೇ ಬಹುಮಾನ 10000 ರೂ., ಮೂರನೇ ಬಹುಮಾನ 5000 ರೂ ಆಗಿರುತ್ತದೆ.
5000 ಮೀ ಮೆರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊದಲ 3 ಸ್ಪರ್ದೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಅಂದರೆ- ಮೊದಲ ಬಹುಮಾನ ರೂ. 10,000, ಎರಡನೇ ಬಹುಮಾನ ರೂ. 5000, ಮೂರನೇ ಬಹುಮಾನ 3000 ಆಗಿರುತ್ತದೆ.
ವಿಶೇಷವಾಗಿ ಮಹಿಳೇಯರಿಗಾಗಿ- 5000 ಮೀಟರ್ ಮ್ಯಾರಾಥಾನ್ ಓಟದ ಸ್ಪರ್ಧೆನ್ನು ಆಯೋಜಿಸಿದ್ದು, ಭಾಗವಹಿಸಿ ವಿಜೇತರಾದ ಮೊದಲ 3 ಸ್ಪರ್ದೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಅಂದರೆ- ಮೊದಲ ಬಹುಮಾನ 10,000/ ರೂಗಳು, ಎರಡನೇ ಬಹುಮಾನ 5000 ರೂಗಳು, ಮೂರನೇ ಬಹುಮಾನ 3000.
ಮ್ಯಾರಾಥಾನ್ ಓಟದಲ್ಲಿ ಸ್ಪರ್ಧಿಸುವವರ ಗಮನಕ್ಕೆ:
“10ಕೆ ಮ್ಯಾರಥಾನ್ ಹಾಗೂ 05ಕೆ ಮ್ಯಾರಥಾನ್ ಪೊಲೀಸರೊಂದಿಗೆ ಓಟ ಸ್ಪರ್ಧೆ” ಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟ ವಯಸ್ಕರಾಗಿರಬೇಕು, ಯಾವುದೇ ಆರೋಗ್ಯದ ಸಮಸ್ಯೆಗಳು ಹೊಂದಿರಬಾರದು. ಯಾವುದೇ ಸಮಸ್ಯೆ ಆದರೂ ಆರೋಗಯದಲ್ಲಿ ಏರುಪೇರು ಆದರೂ ಸ್ಪರ್ಧಾಳುಗಳೇ ಜವಾಬ್ದಾರರಾಗಿರುತ್ತಾರೆ.
ಮ್ಯಾರಾಥಾನ್ ಓಟದ ಮಾರ್ಗ:
10ಕೆ ಮೆರಾಥಾನ್ ಓಟದ ಮಾರ್ಗ : ಜಿಲ್ಲಾ ಕ್ರೀಡಾಂಗಣದಿಂದ ಡೆಂಟಲ್ ಕಾಲೇಜ್ ರಸ್ತೆ, ಗುಂಡಿ ವೃತ್ತ, ಶಾಮನೂರು ರಸ್ತೆ, ಲಕ್ಷ್ಮೀ ಫೋರ್ ಮಿಲ್ ವೃತ್ತ ಮೂಲಕ ಬಾಪೂಜಿ ಬ್ಯಾಂಕ್ ಸಮುದಾಯ ವೃತ್ತ, ಶಾರದಾಂಬ ವೃತ್ತ ಮೂಲಕ ಸಾಗಿ ಕರ್ನಲ್ ರವೀಂದ್ರನಾಥ್ (ಕ್ಲಾಕ್ ಟವರ್ ವೃತ್ತ) ವೃತ್ತದ ಮೂಲಕ ನೇರವಾಗಿ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿ ಅಲ್ಲಿಂದ ಬಲ ತಿರುವು ಪಡೆದು ನೇರವಾಗಿ ಹಳೆ ಪಿಬಿ ರಸ್ತೆಯಲ್ಲಿ ಅರುಣ ವೃತ್ತ (ಚೆನ್ನಮ್ಮ ವೃತ್ತ) ಮೂಲಕ ಸಾಗಿ ಎಂ.ಜಿ ವೃತ್ತದಿಂದ ಬಲ ತಿರುವು ಪಡೆದುಕೊಂಡು ಜಯದೇವ ವೃತ್ತ ಮೂಲಕ ಸಾಗಿ ವಿದ್ಯಾರ್ಥಿ ಭವನ ಜಂಕ್ಷನ್ ಮೂಲಕ ಸಾಗಲಿದೆ.
ಬಾಪೂಜಿ ಬ್ಯಾಂಕ್ ಬಳಿ ಬಲ ತಿರುವ ಪಡೆದುಕೊಂಡು ಜಿಲ್ಲಾ ಕ್ರೀಡಾಂಗಣದ ಬಾಪೂಜಿ ಆಸ್ಪತ್ರೆ ರಸ್ತೆಯ ಕ್ರೀಡಾಂಗಣದ ಮುಖ್ಯದ್ವಾರದ ಒಳಗಡೆ ಬರಲಾಗುತ್ತದೆ.
5ಕೆ ಮೆರಾಥಾನ್ ಓಟದ ಮಾರ್ಗ:
ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಹದಡಿ ರಸ್ತೆಯ ಪೂರ್ವ ಮುಖ್ಯದ್ವಾರದ ಮೂಲಕ ಸಾಗಿ ಎ ಆರ್ ಜಿ ಕಾಲೇಜ್ ರಸ್ತೆ ಮೂಲಕ ಡೆಂಟಲ್ ಯುಬಿಡಿಟಿ ಕಾಲೇಜ್ ಬಳಿ ತಿರುವು ಪಡೆದು ಡೆಂಟಲ್ ಕಾಲೇಜ್ ರಸ್ತೆ ಮೂಖಾಂತರ ಮಡೆಕಲ್ ಹಾಸ್ಟೆಲ್ ರಸ್ತೆ ಮೂಲಕ ಸಾಗಿ ಆಂಜನೇಯ ¨ಡಾವಣೆ ಚಕ್ ದೇ ಪಕ್ಕದ ರ್ಸತೆ ಸಾಗಿ ಥೀಮ್ ಪಾರ್ಕ ಬಳಿ ರಸ್ತೆ ಮೂಖಾಂತರ ನೂತನ ಕಾಲೇಜು ರಸ್ತೆಗೆ ಸೇರಿ ವಿದ್ಯಾನಗರ ಕಾಫಿ ಡೇ ಬಳಿ ಬಲ ತಿರುವು ಪಡೆದು ವಿದ್ಯಾನಗರ 2 ನೇ ಬಸ್ ನಿಲ್ದಾಣ ಬಳಿ ಎಡ ತಿರುವು ಪಡೆದು ಹದಡಿ ರಸ್ತೆಗೆ ಬಂದು ನೇರವಾಗಿ ಹದಡಿ ರಸ್ತೆ ಮುಖಾಂತರ ಸ್ಟೇಡಿಯಂ ಬಳಿ ಬಂದು ಸೇರಲಿದೆ.