SUDDIKSHANA KANNADA NEWS/ DAVANAGERE/ DATE-04-06-2025
ದಾವಣಗೆರೆ: ಪ್ರಾಣಿಗಳ ಅಕ್ರಮ ವಧೆ ಸಾಗಾಣಿಕೆ ಹಾಗೂ ಮಾರಾಟ ಕಾನೂನು ಬಾಹಿರ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹೇಳಿದ್ದಾರೆ.
ಮಹಾನಗರ ವ್ಯಾಪ್ತಿಯ ಮಾಂಸ ಮಾರಾಟ ಮಾಲೀಕರುಗಳು ಅನಧಿಕೃತವಾಗಿ ಒಂಟೆ, ಗೋವುಗಳ ಸಾಗಾಣಿಕೆ ಮತ್ತು ಹತ್ಯೆ ನಡೆಸುವುದು ಕಾನೂನು ರೀತ್ಯಾ ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ಬಾಹಿರವಾಗಿ ಪ್ರಾಣಿಗಳ ಅಕ್ರಮ ವಧೆ, ಸಾಗಾಣಿಕೆ ಹಾಗೂ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಪಾಲಿಕೆ ಆಯುಕ್ತರಾದ ರೇಣುಕಾ ಎಚ್ಚರಿಕೆ ನೀಡಿದ್ದಾರೆ.