SUDDIKSHANA KANNADA NEWS/ DAVANAGERE/ DATE:31-03-2025
ದಾವಣಗೆರೆ: ನ್ಯಾಮತಿ ಎಸ್ ಬಿ ಐ ಬ್ಯಾಂಕ್ ಕಳ್ಳತನ ಪ್ರಕರಣ ದಾವಣಗೆರೆ ಪೊಲೀಸರಿಗೆ ಸವಾಲಾಗಿತ್ತು. ನ್ಯಾಮತಿಯವರೇ ಆದ ಆರೋಪಿಗಳನ್ನು ಸೆದೆಬಡಿಯವಲ್ಲಿ ಯಶಸ್ವಿಯಾಗಿರುವ ಪೊಲೀಸರು ತನಿಖೆ ನಡೆಸಿದಾಗ ಸಿಕ್ಕ ಮಾಹಿತಿ ರೋಚಕ.
ಈ ಹಿಂದೆ ದಾಖಲಾಗಿರುವ ಬ್ಯಾಂಕ್ ದರೋಡೆ ಎಟಿಎಂ ಕಳ್ಳತನ ಪ್ರಕರಣಗಳ ವಿವರ, ಹಳೆಯ ಆರೋಪಿಗಳ ವಿವರ, ಅಂತರ್ ರಾಜ್ಯ ಗ್ಯಾಂಗ್ಗಳ ವಿವರಗಳನ್ನು ಪಡೆದು ಅವುಗಳನ್ನು ಅನಾಲಿಸಿಸ್ ಮಾಡಿ ಪೊಲೀಸ್ ಅಧಿಕಾರಿಗಳ ತಂಡ
ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಐದು ತಿಂಗಳ ಕಾಲ ಸಮಗ್ರ ಮಾಹಿತಿ ಸಂಗ್ರಹಿಸಿ, ಕೂಲಂಕುಷವಾಗಿ ಪರಿಶೀಲಿಸಿದೆ ಎಂದು ಪೂರ್ವ ವಲಯದ ಪೊಲೀಸ್ ಮಹಾ ನಿರ್ದೇಶಕ ರವಿಕಾಂತೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತಾಂತ್ರಿಕ ಮೂಲಗಳಿಂದ ದೊರೆತ ಸುಳಿವಿನಿಂದ ಹಾಗೂ ಹಿಂದೆ ನಡೆದ ಬ್ಯಾಂಕ್ ದರೋಡೆ ಪ್ರಕರಣಗಳ ಅನಾಲಿಸಿಸ್ ನಿಂದ ಎಸ್.ಬಿ.ಐ ಬ್ಯಾಂಕ್ ಪ್ರಕರಣದಲ್ಲಿ ಉತ್ತರ ಪ್ರದೇಶ ರಾಜ್ಯದ ಬದಾಯ ಜಿಲ್ಲೆಯ ಕಕ್ರಾಳ ಗ್ಯಾಂಗ್ ನವರು ಇರಬಹುದು ಎಂಬ ಸಂಶಯದಿಂದ ಪೊಲೀಸ್ ತಂಡಗಳು ಉತ್ತರ ಪ್ರದೇಶದ ಕಕ್ರಾಳಗೆ ನವಂಬರ್ ಎರಡನೇ ವಾರದಲ್ಲಿ ತೆರಳಿದ್ದು ಅಲ್ಲಿ
ಸ್ಥಳೀಯ ಪೊಲೀಸ್ ಎಸ್ಓಜಿ ರವರ ಸಹಯೋಗದೊಂದಿಗೆ ಸುಮಾರು 15ಕ್ಕೂ ಹೆಚ್ಚು ಅಂತರ್ ರಾಜ್ಯ ಸಂಶಯಾತ್ಮಕ ವ್ಯಕ್ತಿಗಳನ್ನು ವಶಕ್ಕೆ ಪಡೆದು ಸಂಪೂರ್ಣ ವಿವರಗಳನ್ನು ಪಡೆದಿದ್ದರು ಎಂದು ವಿವರಿಸಿದರು.
ಎಸ್ ಬಿ ಐ ಬ್ಯಾಂಕ್ ನ್ಯಾಮತಿ ಪ್ರಕರಣಕ್ಕಿಂತ ಹಿಂದೆ 2024ರಲ್ಲಿ ದಾಖಲಾದಂತಹ ಕರ್ನಾಟಕ ಹಾಗೂ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಕಳ್ಳತನ, ದರೋಡೆ ಮತ್ತು ದರೋಡೆ ಪ್ರಯತ್ನ ಪಟ್ಟಂತಹ ಪ್ರಕರಣಗಳನ್ನು ಪರಿಶೀಲಿಸಲಾಯಿತು. ಅದರಲ್ಲಿ 2024ರ ಆಗಸ್ಟ್ 2ರಂದು ಭದ್ರಾವತಿ ತಾ ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಎಸ್ ಬಿ ಐ ಬ್ಯಾಂಕ್ ಕಳ್ಳತನದ ಪ್ರಯತ್ನ ನಡೆದ ಪ್ರಕರಣವನ್ನು ಪರಿಶೀಲಿಸಿದಾಗ ನ್ಯಾಮತಿಗೆ 30ಕಿಲೋಮಿ ಹತ್ತಿರವಿರುವುದು ಮತ್ತು ನ್ಯಾಮತಿ ಬ್ಯಾಂಕ್ನ
ಪ್ರಕರಣಕ್ಕೆ ಸಾಮ್ಯತೆ ಇರುವುದರಿಂದ ಆ ಪ್ರಕರಣದ ತಾಂತ್ರಿಕ ವಿವರಗಳನ್ನು ಆಳವಾಗಿ ವಿಶ್ಲೇಷಣೆ ಮಾಡಿದ ನಂತರ ತನಿಖೆಯ ದಿಕ್ಕು ಮತ್ತೆ ಉತ್ತರಪ್ರದೇಶದ ಬದಾಯು ಜಿಲ್ಲೆಯ ಕಕ್ರಾಳ ಗ್ಯಾಂಗ್ ಕಡೆಗೆ ಹೋಯಿತು ಎಂದು ತಿಳಿಸಿದರು.
ಮತ್ತೊಮ್ಮೆ ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಜನವರಿ ಮೊದಲನೇ ವಾರ ಕಕ್ರಾಳ ಬದಾಯುಗೆ ಹೋಗಿ ಅಲ್ಲಿನ ವಿಪರೀತ ಚಳಿಯ ಮತ್ತು ವೈಪರೀತ್ಯ ಹವಾಮಾನಗಳ ನಡುವೆಯೂ ಅಲ್ಲಿನ ಸ್ಥಳೀಯ ಪೊಲೀಸ್ ಸಹಯೋಗವಿಲ್ಲದೆ ಸಂಶಯಾಸ್ಪದ ವ್ಯಕ್ತಿಗಳ ಮನೆಯ ಮೇಲೆ ದಾಳಿ ಮಾಡಿ ಹೆಚ್ಚಿನ ಮಾಹಿತಿ ಕಲೆಹಾಕಿ ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಮೂರು ವಾರಗಳ ಕಾಲ ಬೀಡು ಬಿಟ್ಟು ಹಿಂದಿರುಗಿತ್ತು. ಕೆಲವು ಸಿಬ್ಬಂದಿಗಳನ್ನು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಬಿಟ್ಟು ಬರಲಾಗಿತ್ತು ಎಂದು ಹೇಳಿದರು.
ಫೆಬ್ರವರಿ ಮೊದಲನೇಯ ವಾರದಲ್ಲಿ ಮತ್ತೊಂದು ತಂಡವು ಹರಿಯಾಣ, ಹಿಮಾಚಲ ಪ್ರದೇಶ, ಕಾಕಿನಾಡ, ವಾರಂಗಲ್, ಕೋಲಾರ, ತಮಿಳುನಾಡು & ಕೇರಳಾ ರಾಜ್ಯಗಳಿಗೆ ತಂಡವು ಭೇಟಿ ನೀಡಿ ಆರೋಪಿಗಳಿಗಾಗಿ ಶೋಧ ಮಾಡಿತ್ತು ಎಂದು ಮಾಹಿತಿ ನೀಡಿದರು.
ಈ ಪ್ರಯತ್ನಗಳ ಫಲವಾಗಿ ಪೊಲೀಸ್ ಅಧಿಕಾರಿಗಳಿಗೆ ಬಂದಂತಹ ಮಾಹಿತಿ ಮೇರೆಗೆ ಮಾರ್ಚ್ -16 ರಂದು ಎಸ್ಬಿಐ ಸವಳಂಗ ಬ್ರಾಂಚ್ಗೆ ಡಕಾಯಿತಿ ಮಾಡಲು ಬಂದಿದ್ದಂತಹ ತಂಡದಲ್ಲಿನ ನಾಲ್ವರನ್ನು ಸೆರೆ ಹಿಡಿಯುವಲ್ಲಿ ತಂಡವು ಯಶಸ್ವಿಯಾಗಿದೆ. ಮತ್ತೆ ಆಗಬಹುದಾದ ಬ್ಯಾಂಕ್ ದರೋಡೆ ಕಳ್ಳತನ ದೊಡ್ಡ ಪ್ರಕರಣವನ್ನು ತಡೆಗಟ್ಟಿದಂತಾಗಿದೆ ಎಂದು ಹೇಳಿದರು.
ಉತ್ತರ ಪ್ರದೇಶದ ಬಾದಾಯು ಜಿಲ್ಲೆಯ ಕಕ್ರಾಳ ಗ್ರಾಮದ ಗುಡ್ಡು ಅಲಿಯಾಸ್ ಗುಡ್ಡು ಕಾಲಿಯಾ, ಅಸ್ಲಾಂ ಅಲಿಯಾಸ್ ಟನ್, ಹಜರತ್ ಅಲಿ, ಕಮರುದ್ದೀನ್ ಅಲಿಯಾಸ್ ಬಾಬು ಸೆರೆಲಿ ಬಂಧಿತರಾಗಿದ್ದರು. ಕುಖ್ಯಾತ ಅಂತರ್ ರಾಜ್ಯ ಬ್ಯಾಂಕ್ ದರೋಡೆಕೋರರಾಗಿದ್ದು ಒಬ್ಬರನ್ನು ಬಿಟ್ಟು ಉಳಿದವರು ಈ ಹಿಂದೆ ಎಲ್ಲಿಯೂ ಬಂಧಿತರಾಗಿರುವುದಿಲ್ಲ. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕರ್ನಾಟಕ ಬ್ಯಾಂಕ್ ಹೊಸಳ್ಳಿ ಪ್ರಕರಣದಲ್ಲಿ 15 ಬಂಗಾರ ಆಭರಣ, ಕೊಪ್ಪಳ ಬೆವೂರು ಕರ್ನಾಟಕ ಬ್ಯಾಂಕ್ ಕಳ್ಳತನ ಪ್ರಕರಣಗಳಲ್ಲಿ 4 ಕೆಜಿ ಬಂಗಾರ ಆಭರಣಗಳನ್ನು ಕಳ್ಳತನ ಭಾಗಿಯಾಗಿ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಗಳು.
2014ರಿಂದ 2024ರವರೆಗೆ ಸರಣಿ ಬ್ಯಾಂಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿರುತ್ತದೆ. ಅಲ್ಲದೆ ಭದ್ರಾವತಿ ಎಸ್ಬಿಐ ಬ್ಯಾಂಕ್ ಪ್ರಯತ್ನ, ತೆಲಂಗಾಣ ರಾಜ್ಯದ ವಾರಂಗಲ್ ಎಸ್ಬಿಐ ಕಳ್ಳತನ , ಹಾವೇರಿ ತಡಸ್ ಬಂಗಾರ ಅಂಗಡಿ ಕಳ್ಳತನ, ಜಾರ್ಖಂಡ್ ರಾಜ್ಯ ಬ್ಯಾಂಕ್ ಕಳ್ಳತನ ಪ್ರಯತ್ನ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ವಾರೆಂಟ್ ಇರುವುದು ತಿಳಿದು ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಮಾಲೂನಿಂದ ಬಾಬುಸಹಾ, ಹಫೀಜ್ ಬಂಧಿಸಲಾಗಿದ್ದು, ಒಟ್ಟು ಆರು ಕುಖ್ಯಾತ ದರೋಡೆಕೋರರನ್ನು ಬಂಧಿಸಿದಂತಾಗಿ ಎಂದು ಐಜಿಪಿ ವಿವರಿಸಿದರು.
ಗೋಷ್ಠಿಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಡಿವೈಎಸ್ಪಿ ಬಸವರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.