SUDDIKSHANA KANNADA NEWS/ DAVANAGERE/ DATE:04-03-2025
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಪಟಾಕಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ರನ್ಯಾ ರಾವ್ ಅರೆಸ್ಟ್ ಆಗಿದ್ದಾರೆ.
ಬರೋಬ್ಬರಿ 12 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಅಕ್ರಮ ಸಾಗಣೆ ಆರೋಪದಡಿ ಬಂಧಿಸಲಾಗಿದೆ. ಮಾಜಿ ಐಪಿಎಸ್ ಅಧಿಕಾರಿಯ ಮರಿ ಮೊಗಳು ಈಕೆ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ನಟಿಸಿದ್ದ ಈಕೆ ಈ ಕೃತ್ಯದಲ್ಲಿ ಅರೆಸ್ಟ್ ಆಗಿರುವುದು ಫ್ಯಾನ್ಸ್ ಗೆ ಆಘಾತ ತಂದಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಆರೋಪದ ಮೇಲೆ ಬಹುಭಾಷಾ ನಟಿ ರನ್ಯಾ ರಾವ್ ವಶಕ್ಕೆ ಪಡೆದು ವಿಚಾರಣೆ ಮಾಡಲಾಯಿತು. ವಿದೇಶದಿಂದ ಆಗಮಿಸಿದ್ದ ಈ ನಟಿಯು ಅಕ್ರಮ ಚಿನ್ನ ಸಾಗಾಟ ಮಾಡುತ್ತಿರುವ ಖಚಿತ ವರ್ತಮಾನದ ಮೇರೆಗೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಪೋರ್ಟ್ ಕಸ್ಟಮ್ಸ್ ಡಿ ಆರ್ ಐ ತಂಡದ ಅಧಿಕಾರಿಗಳು ಬಂಧಿಸಿ
ವಿಚಾರಣೆ ನಡೆಸುತ್ತಿದ್ದಾರೆ.
ಮಾರ್ಚ್ 3ರಂದು ಸೋಮವಾರ ರಾತ್ರಿ ದುಬೈನಿಂದ ನಟಿ ನಟಿ ರನ್ಯಾ ರಾವ್ ಬೆಂಗಳೂರಿಗೆ ಪ್ರಯಾಣ ಬೆಳಸಿದ್ದರು. ದೇಶದಿಂದ ಹೆಚ್ಚುವರಿ ಚಿನ್ನ ಸಾಗಾಟ ಮಾಡಲು ಯತ್ನಿಸಿದ ಆರೋಪದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿಆರ್ಐ ತಂಡದ ಅಧಿಕಾರಿಗಳು ಕೂಡ ವಿಮಾನ ನಿಲ್ದಾಣಕ್ಕೆ ಬಂದಿದ್ದು, ನಟಿ ವಿಮಾನದಿಂದ ಇಳಿಯುತ್ತಿದ್ದಂತೆ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ನಟಿ ನಟಿ ರನ್ಯಾ ರಾವ್ ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಹಾಗೂ ಗೋಲ್ಡ್ನ್ ಸ್ಟಾರ್ ಗಣೇಶ್ ಅಭಿನಯದ ಪಟಾಕಿ ಚಿತ್ರದಲ್ಲಿ ನಟಿಸಿದ್ದಾರೆ.
15 ಕೆಜಿ ಚಿನ್ನ?
ನಿಗದಿತ ಪ್ರಮಾಣದ ಬೆಳ್ಳಿ ಮಾತ್ರ ದುಬೈನಿಂದ ಭಾರತಕ್ಕೆ ಆಗಮಿಸುವವರು ತರಬಹುದು. ಹೆಚ್ಚಿನದ್ದನ್ನು ತರಲು ಅನುಮತಿ ಪಡೆದಿರಬೇಕು. ಅಕ್ರಮವಾಗಿ ಯಾವುದೇ ಕಾರಣಕ್ಕೂ ತರುವಂತಿಲ್ಲ. ಈ ನಟಿ ಈ ನಿಯಮ ಮೀರಿದ್ದರಿಂದ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಪುರುಷರಿಗೆ 20 ಗ್ರಾಂ, ಮಹಿಳೆಯರಿಗೆ 40 ಗ್ರಾಂ ಚಿನ್ನವನ್ನು (ಗರಿಷ್ಠ 1 ಲಕ್ಷ ರೂ. ಮೌಲ್ಯದ) ತರಬಹುದು. ನಟಿ ರನ್ಯಾ ರಾವ್ ಅವರು 15 ಕೆಜಿಯಷ್ಟು ಚಿನ್ನ ತಂದಿದ್ದಾರೆ ಎಂಬ
ಆರೋಪ ಕೇಳಿಬಂದಿವೆ. ಸದ್ಯ ವಿಚಾರಣೆ ಬಳಕವಷ್ಟೇ ಸತ್ಯಸತ್ಯತೆ ತಿಳಿಯಬೇಕಿದೆ.