SUDDIKSHANA KANNADA NEWS/ DAVANAGERE/ DATE:06-03-2025
ದಾವಣಗೆರೆ: ರಾಜ್ಯದಲ್ಲಿ ಇತ್ತೀಚೆಗೆ ಕೋಳಿ ಶೀತ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಈ ರೋಗವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕರು ಈ ರೋಗಕ್ಕೆ ಸಂಬಂಧಿಸಿದಂತೆ, ಯಾವುದೇ ಮಾಹಿತಿ ಕಂಡುಬಂದರೆ ಅಂದರೆ, ಶಂಕಾಸ್ಪದವಾಗಿ ಸತ್ತ ಹಿತ್ತಲ ಕೋಳಿಗಳು, ವನ್ಯ ಪಕ್ಷಿಗಳ ಮಾಹಿತಿಯನ್ನು ನೀಡುವಂತೆ ಸೂಚಿಸಲಾಗಿದೆ.
ಕೂಡಲೇ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ದೂ.ಸಂಖ್ಯೆ 9916860163 ಗೆ ಕರೆಮಾಡಿ ಮಾಹಿತಿ ನೀಡುವಂತೆ ಇಲಾಖೆಯ ಉಪನಿರ್ದೇಶಕರಾದ ಡಾ. ಮಹೇಶ್ ತಿಳಿಸಿದ್ದಾರೆ.