SUDDIKSHANA KANNADA NEWS/ DAVANAGERE/ DATE:18-12-2024
ಬಳ್ಳಾರಿ: ಅಲಿಮ್ಕೊ ಆಕ್ಸಿಲಿಯರಿ ಉತ್ಪಾದನಾ ಕೇಂದ್ರ ವತಿಯಿಂದ ಎಡಿಐಪಿ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ಅವಶ್ಯವಿರುವ ಸಾಧನ ಸಲಕರಣೆ ವಿತರಿಸುವುದಕ್ಕೆ ತಾಲ್ಲೂಕು ಮಟ್ಟದಲ್ಲಿ ವೈದ್ಯಕೀಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ತಪಾಸಣಾ ಶಿಬಿರದ ಸ್ಥಳ-ದಿನಾಂಕ:
ಡಿ.23 ರಂದು ಬಳ್ಳಾರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 04 ರವರೆಗೆ, ಡಿ.24 ರಂದು ಕುರುಗೋಡು ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 4 ರವರೆಗೆ,
ಡಿ.26 ರಂದು ಸಿರುಗುಪ್ಪ ತಾಲ್ಲೂಕಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 04 ರವರೆಗೆ ಹಾಗೂ ಡಿ.27 ರಂದು ಸಂಡೂರು ತಾಲ್ಲೂಕಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಿಗ್ಗೆ
10.30 ರಿಂದ ಸಂಜೆ 04 ರವರೆಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಲು ಹಾಗೂ ತಪಾಸಣೆ ಶಿಬಿರ ಯಶಸ್ವಿಗೊಳಿಸಬೇಕು ಎಂದಿದ್ದಾರೆ.
ಹಿರಿಯ ನಾಗರಿಕೆಗೆ *ಬೇಕಾದ ದಾಖಲೆ:
ಹಿರಿಯ ನಾಗರಿಕರ ಗುರುತಿನ ಚೀಟಿ ಅಥವಾ ಯಾವುದಾದರು ವಯಸ್ಸಿನ ದಾಖಲಾತಿಗಳು, ಪಡಿತರ ಚೀಟಿ (ಬಿ.ಪಿ.ಎಲ್ ಕಾರ್ಡ್), ಮಾಶಾಸನ ದಾಖಲಾತಿ, ಆಧಾರ ಪ್ರಮಾಣ ಪತ್ರ (ಇವುಗಳಲ್ಲಿ ಯಾವುದಾದರು ಒಂದು),
ಆಧಾರ್ಕಾರ್ಡ್, ವಾಸಸ್ಥಳಕ್ಕೆ ಸಂಬAಧಿಸಿದ ದಾಖಲಾತಿಗಳು, ರೇಷನ್ ಕಾರ್ಡ, ಚುನಾವಣೆಯ ಗುರುತಿನ ಚೀಟಿ (ಇವುಗಳಲ್ಲಿ ಯಾವುದಾದರು ಒಂದು), ಅಭ್ಯರ್ಥಿಯ 2 ಪಾಸ್ಪೋಟ್ ಸೈಜ್ ಫೋಟೋ.
ಮೇಲಿನ ಎಲ್ಲಾ ಅಗತ್ಯ ದಾಖಲೆಗಳನ್ನು ದ್ವಿಪ್ರತಿಯಲ್ಲಿ ಫಲಾನುಭವಿಗಳು ವೈದ್ಯಕಿಯ ತಪಾಸಣೆ ಶಿಬಿರಕ್ಕೆ ಹಾಜರಾಗುವ ಸಂದರ್ಭದಲ್ಲಿ ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು.
*ತಪಾಸಣೆ ಶಿಬಿರದಲ್ಲಿ ಗುರುತಿಸಲಾದ ಹಿರಿಯ ನಾಗರಿಕರಿಗೆ ಒದಗಿಸಲಾಗುವ ಸಾಧನ ಸಲಕರಣೆಗಳು:*
ವ್ಹಿಲ್ಚೇರ್, ಎಲ್ಬೋ ಕ್ರಚ್ಯಸ್, ಫೊಲ್ಡಿಂಗ್ ವಾಕರ್, ಶ್ರವಣ ಸಾಧನ, ತ್ರಿಪೊಡ್ ಮತ್ತು ಟೆಟ್ರಾಪ್ರೆಡ, ವಾಕಿಂಗ್ ಸ್ಟಿಕ್.
ಹೆಚ್ಚಿನ ಮಾಹಿತಿಗಾಗಿ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ಮೊಬೈಲ್ ಸಂಖ್ಯೆ: ಬಳ್ಳಾರಿ-8880875620, ಸಿರುಗುಪ್ಪ-9743509698, ಸಂಡೂರು-9632052270, ಕುರುಗೋಡು–9538000887 ಅಥವಾ ಜಿಲ್ಲಾ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಮೊ:9731961326 ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ದೂ:08392-267886 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.