SUDDIKSHANA KANNADA NEWS/ DAVANAGERE/ DATE:03-03-2025
ದಾವಣಗೆರೆ. ಮಾ.೨; ನಗರದ ಎಸ್ ಎಸ್ ಕೇರ್ ಟ್ರಸ್ಟ್ ನ ವಿದ್ಯಾರ್ಥಿ ವಿಭಾಗದಿಂದ ಸರ್ಕಾರಿ ಅಂಗವಿಕಲರ ಶಾಲೆಯಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಕೇರ್ ಟ್ರಸ್ಟ್ ನ ವಿದ್ಯಾರ್ಥಿ ವಿಭಾಗದವರು ಅಂಧ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ದಂತ ತಪಾಸಣೆ ನಡೆಸಿದರು ಜೊತೆಗೆ ಆರೋಗ್ಯದ ಸಲಹೆಗಳನ್ನು ನೀಡಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ವಿದ್ಯಾರ್ಥಿಗಳಿಗೆ ನೈರ್ಮಲ್ಯದ ಬಗ್ಗೆ ಹಾಗೂ ಸರಿಯಾಗಿ ಕೈ ತೊಳೆಯುವ ವಿಧಾನಗಳ ಕುರಿತು ತಿಳಿಸಿಕೊಟ್ಟರು.ನಂತರ 1,800 ಬ್ರೈಲ್ ಕಾಗದಗಳನ್ನು ವಿದ್ಯಾರ್ಥಿಗಳ ಅಧ್ಯಯನವನ್ನು ಬೆಂಬಲಿಸುವ ಸಲುವಾಗಿ ಎಸ್ ಎಸ್ ಕೇರ್ ಟ್ರಸ್ಟ್ ನ ವಿದ್ಯಾರ್ಥಿ ವಿಭಾಗದಿಂದ ಕೊಡುಗೆಯಾಗಿ ನೀಡಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಅಭಿವೃದ್ಧಿ ಮತ್ತು ಕಲ್ಯಾಣಾಧಿಕಾರಿಗಳಾದ ಡಾ.ಪ್ರಕಾಶ್ ಅವರು ಅಂಧ ಮಕ್ಕಳು ಹೇಗೆ ತಮ್ಮ ದಿನಿತ್ಯದ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾರೆ ಹಾಗೂ ಅವರ ಸಹಾಯ ಸಾಧನಗಳೊಂದಿಗೆ ಅವರ ದಿನಚರಿ ಹೇಗಿರುತ್ತದೆ ಎಂದು ತಿಳಿಸಿಕೊಟ್ಟರು ಹಾಗೂ ಮಕ್ಕಳ ಬ್ರೈಲ್ ಓದು ಮತ್ತು ಬರೆಯುವಿಕೆ ಬಗ್ಗೆ ಮಾಹಿತಿ ನೀಡಿದರು.