SUDDIKSHANA KANNADA NEWS/ DAVANAGERE/ DATE:12-04-2025
ದಾವಣಗೆರೆ: ಜಿಲ್ಲೆಯಾದ್ಯಂತ ಹನುಮ ಜಯಂತಿ ಸಡಗರ, ಸಂಭ್ರಮದಿಂದ ನೆರವೇರಿತು.
ದಾವಣಗೆರೆ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಮಾಯಕೊಂಡ, ಜಗಳೂರಿನಲ್ಲಿಯೂ ಹಬ್ಬದ ಸಂಭ್ರಮ ಕಂಡು ಬಂತು. ಎಲ್ಲೆಡೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಹನುಮ ಜಯಂತಿ ಹಾಗೂ ಶ್ರೀ ಆಂಜನೇಯಸ್ವಾಮಿಯ ರಥೋತ್ಸವ ಭಕ್ತರ ಜಯಘೋಷದೊಂದಿಗೆ ಸಡಗರದಿಂದ ನಡೆಯಿತು.
ಹನುಮ ಜಯಂತಿ ಹಾಗೂ ಶ್ರೀ ಆಂಜನೇಯಸ್ವಾಮಿಯ ರಥೋತ್ಸವ ಅಂಗವಾಗಿ ಶ್ರೀ ರಾಮದೇವರ ಮತ್ತು ಶ್ರೀ ಆಂಜನೇಯಸ್ವಾಮಿಯ ಶಿಲಾಮೂರ್ತಿಗೆ ವಿಶೇಷ ಪೂಜೆ ಭಜನೆ, ಕೀರ್ತನೆ ಹನುಮಾನ್ ಚಾಲೀಸ ಪಠಣ ಜರುಗಿತು.
ಬೆಳಿಗ್ಗೆ ಭಕ್ತರು ಪಲ್ಲಕ್ಕಿಯಲ್ಲಿ ಹೊತ್ತು ತಂದ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ನಂತರ ಅದರಲ್ಲಿ ಪ್ರತಿಷ್ಠಾಪಿಸಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀ ಆಂಜನೇಯಸ್ವಾಮಿಯ ರಥೋತ್ಸವವನ್ನು ನಾದಸ್ವರ ವೀರಗಾಸೆ ಡೊಳ್ಳು ಹಲಗೆ ಭಜನೆ ಹಾಗೂ ಮಂಗಳ ವಾಧ್ಯಗಳೊಂದಿಗೆ ಮೆರವಣಿಗೆಯೊಂದಿಗೆ ಸಾವಿರಾರು ಭಕ್ತರು ರಥವನ್ನು ಶೂಲದ ರಾಮ ದೇಗುಲದವರಗೆ ಎಳೆದರು.