SUDDIKSHANA KANNADA NEWS/ DAVANAGERE/ DATE:08-03-2025
ದಾವಣಗೆರೆ: ಸಂಸದರ ಆಪ್ತ ಕಾರ್ಯದರ್ಶಿ ಹರೀಶ್ ಕೆ.ಎಲ್. ಬಸಾಪುರ ಅವರ ಮಾವನವರಾದ ಹಳೇಬಾತಿ ಗ್ರಾಮದ ಎಚ್. ಎಸ್ ಹನುಮಂತಪ್ಪ ನವರು (58 ವರ್ಷ) ಇಂದು ಮಧ್ಯಾಹ್ನ 1 ಗಂಟೆಗೆ ನಿಧನ ಹೊಂದಿದ್ದಾರೆ.
ಪತ್ನಿ, ಪುತ್ರಿ, ಅಳಿಯ ಹರೀಶ್ ಕೆ.ಎಲ್.ಬಸಾಪುರ, ಮೊಮ್ಮಗ, ತಾಯಿ, ಸಹೋದರ ಹಾಗೂ ಸಹೋದರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಾ. 9ರ ಭಾನುವಾರ ಬೆಳಗ್ಗೆ 11 ಗಂಟೆಗೆ ಮೃತರ ಜಮೀನಿನಲ್ಲಿ ನೆರವೇರಲಿದೆ.