SUDDIKSHANA KANNADA NEWS/ DAVANAGERE/ DATE:27-01-2025
ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ನ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ಸಿರಿಗೆರೆ ಶ್ರೀಮತ್ ಸಾಧುಸದ್ಧ ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಸಮಾಜದ ಹಿರಿಯ ಚೇತನರು, ಮಾಜಿ ಸಚಿವರು ಹಾಗೂ ದಕ್ಷಣ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಡಾ. ಶಾಮನೂರು ಶಿವಶಂಕರಪ್ಪ ಅವರ ಆರೋಗ್ಯದಿಂದ ಚೇತರಿಸಿಕೆಯಿಂದ ಅವರ ದಿನನಿತ್ಯದ ಕಾರ್ಯದಲ್ಲಿ ತೊಡಗಿರುವುದನ್ನು ನೋಡಿ ಅತ್ಯಂತ ಸಂತೋಷವಾಯಿತು ಎಂದು ಹೆಚ್. ಆರ್. ಬಸವರಾಜಪ್ಪ ತಿಳಿಸಿದರು.
ಈ ವೇಳೆ ಶ್ರೀಮತ್ ಸಾಧುಸಧರ್ಮ ವೀರಶೈವ ಸಂಘದಿಂದ ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪ, ಗೌರವ ಕಾರ್ಯದರ್ಶಿ ಮಾಗನೂರು ಸಂಗಮೇಶ್ವರ ಗೌಡ್ರು,
ಹರಿಹರ ತಾಲೂಕು ಸಮಾಜ ಅಧ್ಯಕ್ಷ ಅಮರಾವತಿ ಮಾಹ ದೇವಪ್ಪಗೌಡ್ರು, ಸಮಾಜ ಮುಖಂಡ, ಹರಿಹರ ತಾಲೂಕಿನ ನಿಟ್ಟೂರು ಶಿವಣ್ಣ ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.