SUDDIKSHANA KANNADA NEWS/ DAVANAGERE/ DATE:01-04-2025
ಬೆಂಗಳೂರು: ರಾಜ್ಯ ಸರ್ಕಾರವು ಯುಗಾದಿ ಹಬ್ಬಕ್ಕೆ ಮಹಿಳೆಯರಿಗೆ ಗಿಫ್ಟ್ ಕೊಟ್ಟಿದೆ. ಆದ್ರೆ, ಅದು ಗೃಹಲಕ್ಷ್ಮೀಯರಿಗೆ ಖುಷಿ ಕೊಟ್ಟಿಲ್ಲ.
ಹೌದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಯುಗಾದಿ ಹಬ್ಬಕ್ಕೆ ಎರಡು ತಿಂಗಳ ಹಣ ಅಂಕೌಂಟ್ ಗೆ ಪಾವತಿ ಮಾಡಲಾಗುತ್ತದೆ ಎಂಬ ಭರವಸೆ ನೀಡಿದ್ದರು. ಮಹಿಳೆಯರು ನಾಲ್ಕು ಸಾವಿರ ರೂಪಾಯಿ ಬರುತ್ತೆ ಎಂದು ಕಾದುಕುಳಿತಿದ್ದರು. ಆದ್ರೆ, ಹಣ ಬಂದಿದ್ದು ಮಾತ್ರ 2 ಸಾವಿರ ರೂಪಾಯಿ ಮಾತ್ರ.
ಒಟ್ಟು ಮೂರು ತಿಂಗಳ ಆರು ಸಾವಿರ ರೂಪಾಯಿ ಬರಬೇಕಿತ್ತು. ಈಗ ಒಂದು ತಿಂಗಳ ಹಣ ಮಾತ್ರ ಕ್ರೆಡಿಟ್ ಆಗಿದ್ದು, ಉಳಿದ ಹಣ ಮತ್ತೆ ಯಾವಾಗ ಬರುತ್ತೆ ಎಂದು ಮಹಿಳೆಯರು ಪ್ರಶ್ನಿಸುತ್ತಿದ್ದಾರೆ. ನಾಲ್ಕು ಸಾವಿರ ರೂಪಾಯಿ ನೀಡುವುದಾಗಿ ಹೇಳಿದ್ದ ಸಚಿವೆಯ ಭರವಸೆ ಈಡೇರಿಲ್ಲ. ಈಗ ಎರಡು ಸಾವಿರ ರೂಪಾಯಿ ಒಂದು ತಿಂಗಳದ್ದು ಮಾತ್ರ ಬಂದಿದೆ. ಉಳಿದ ಹಣವನ್ನೂ ಹಾಕಿದರೆ ಹಬ್ಬ ಸಂಭ್ರಮದಿಂದ ಮಾಡಬಹುದಿತ್ತು. 2 ಸಾವಿರ ಆದರೂ ಬಂತಲ್ಲ ಎಂಬುದಷ್ಟೇ ಸಮಾಧಾನ ಎನ್ನುತ್ತಾರೆ ಗೃಹಲಕ್ಷ್ಮೀಯರು.
ರಾಜ್ಯ ಸರ್ಕಾರ ಮಹತ್ವದ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಗ್ರಹಣ ಹಿಡಿದಿದೆ. ಮಹಿಳೆಯರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪದ ನಡುವೆ ಒಂದು ತಿಂಗಳಿನ ಹಣ ಪಾವತಿಸಿರುವ ಆಡಳಿತ ಪಕ್ಷದ ಶಾಸಕರು ಸಮರ್ಥನೆ ಮಾಡುತ್ತಿದ್ದಾರೆ. ಉಳಿದ ಹಣವೂ ಶೀಘ್ರದಲ್ಲಿಯೇ ಬರಲಿದೆ. ಮಹಿಳೆಯರು ಆತಂಕಕ್ಕೆ ಒಳಗಾಗಬಾರದು ಎಂದು ಹೇಳುತ್ತಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಯುಗಾದಿ ಹಬ್ಬದ ದಿನದಂದೇ 2 ಸಾವಿರ ರೂಪಾಯಿ ಮಹಿಳೆಯರ ಅಕೌಂಟ್ ಗೆ ಬಂದಿದೆ. ಉಳಿದ ಹಣವೂ ಆದಷ್ಟು ಬೇಗ ಕ್ರೆಡಿಟ್ ಆಗುತ್ತದೆ. ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವರೂ
ಹಣವನ್ನು ಶೀಘ್ರದಲ್ಲಿಯೇ ಪಾವತಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಮಹಿಳೆಯರು ಮಾತ್ರ ಹಿಡಿಶಾಪ ಹಾಕುವುದನ್ನು ಮುಂದುವರಿಸಿದ್ದು, ಎಲ್ಲಾ ಬೆಲೆ ಏರಿಕೆ ಮಾಡಿ, ನಮಗೂ ಆಗೊಮ್ಮೆ ಈಗೊಮ್ಮೆ ಎಂಬಂತೆ ಹಣ ಪಾವತಿ ಮಾಡಲಾಗುತ್ತಿದೆ. ಹಣ ಬಿಡುಗಡೆ ಮಾಡಿ, ಬೆಲೆ ಏರಿಕೆ ಕಡಿಮೆ ಮಾಡಿ ಎಂದು
ಗೃಹಿಣಿಯರು ಒತ್ತಾಯಿಸುತ್ತಿದ್ದಾರೆ.