SUDDIKSHANA KANNADA NEWS/ DAVANAGERE/ DATE:22-01-2025
ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಇಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವದಲ್ಲಿ ಅಡುಗೆ ಭಟ್ಟರ ಪುತ್ರಿ 4 ಹಾಗೂ ರೈತನ ಮಗಳಿಗೆ ಮೂರು ಚಿನ್ನದ ಪದಕ ಲಭಿಸಿದ್ದು, ಪ್ರದಾನ ಮಾಡಲಾಯಿತು.
ಶಿವಮೊಗ್ಗದ ರವೀಂದ್ರನಗರದ ಗಣಪತಿ ದೇವಸ್ಥಾನದ ಅಡುಗೆ ಭಟ್ಟ ಸುರೇಶ್-ಸುಧಾ ದಂಪತಿ ಪುತ್ರಿ ಎನ್.ಎಸ್.ಸಂಜೀತಾ ಅವರು ೨೦೨೨-೨೩ನೇ ಸಾಲಿನ ನಾಲ್ಕು ಪದಕಕ್ಕೆ ಮುತ್ತಿಟ್ಟರು.
ಕಾಶಿಪುರದ ಸಂಜೀತಾ ಅವರು ಬೆಂಗಳೂರಿನ ಜಿಕೆವಿಕೆಯ ಚಿಂತಾಮಣಿ ಕ್ಯಾಂಪಸ್ ನಲ್ಲಿ ಕೃಷಿ ಕೀಟ ಶಾಸ್ತ್ರದಲ್ಲಿ ಎಂಎಸ್ಸಿ ಮಾಡುತ್ತಿದ್ದಾರೆ. ಮುಂದೆ ಪಿಎಚ್ ಡಿ ಮಾಡುವ ಗುರಿ ಹೊಂದಿದ್ದಾರೆ. ರೈತರಿಗೆ ಒಳ್ಳೆಯದನ್ನು ಮಾಡುವ ಗುರಿ ಹೊಂದಿದ್ದಾರೆ.
ರೈತನ ಮಗಳಿಗೆ 3 ಚಿನ್ನ:
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಗೌಡರಗೆರೆಯ ಜಿ.ಎಸ್.ಪೂರ್ಣಿಮಾ 2023-24ನೇ ಸಾಲಿನಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ಜಿ.ಪಿ.ಹನುಮಂತ-ಎಲ್.ಆರ್.ರಾಜೇಶ್ವರಿ ದಂಪತಿ ಪುತ್ರಿಯಾಗಿದ್ದು ಜೆನಿಟಿಕ್
ಆ್ಯಂಡ್ ಪ್ಲ್ಯಾನ್ ಬೀಡಿಂಗ್ ವಿಷಯದಲ್ಲಿ ಎಂಎಸ್ಸಿ ಮಾಡುತ್ತಿದ್ದಾರೆ. ಸಂಶೋಧನೆಯಲ್ಲಿ ಮುಂದುವರಿಯುವ ಇಂಗಿತವನ್ನು ವ್ಯಕ್ತಪಡಿಸಿದರು. ಇತ್ತೀಚೆಗೆ ಒಂದು ತಿಂಗಳು ಸಂಶೋಧನೆಗಾಗಿ ಬ್ಯಾಂಕಾಕ್ ಗೂ ಹೋಗಿ ಅಧ್ಯಯನ ಮಾಡಿಕೊಂಡು ಬಂದಿದ್ದಾರೆ.