ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಓಪನ್ ಡೇಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು: ಜಿಎಂ ವಿವಿಯಲ್ಲಿ ಭವ್ಯ ಭವಿಷ್ಯದ ಕೋರ್ಸ್ ಗಳ ಆಯ್ಕೆ ಸಂಭ್ರಮ!

On: December 13, 2024 8:05 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:13-12-2024

ದಾವಣಗೆರೆ : ಪಿಯು ಆದ ಮೇಲೆ ಮುಂದೆ ಯಾವ ಪದವಿಗೆ ಸೇರಬೇಕು, ಪದವಿ ನಂತರ ಹೆಚ್ಚಿನ ವ್ಯಾಸಂಗಕ್ಕೆ ಯಾವ ಕೋರ್ಸ್ ತೆಗೆದುಕೊಳ್ಳಬೇಕು. ಹೀಗೆ ಶೈಕ್ಷಣಿಕ ವಿವಿಧ ಹಂತಗಳ ಮತ್ತು ಭವ್ಯ ಭವಿಷ್ಯದ ಕೋರ್ಸ್ ಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಯೋಚನೆಗಳು ಮೂಡುವುದು ಸಹಜ.

ಇದನ್ನು ಪರಿಹರಿಸಿಕೊಳ್ಳುವ ಉತ್ತಮ ಅವಕಾಶವು ನಗರದ ಜಿಎಂ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಲಭ್ಯತೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ನೇರವಾಗಿ ತಿಳಿಯಬಹುದಾದ ಮುಕ್ತತೆಯ ದಿನವಾದ “ಓಪನ್ ಡೇ” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕಿತು.

ವರುಷದ ಸಂಭ್ರಮದಲ್ಲಿರುವ ಜಿಎಂ ವಿಶ್ವವಿದ್ಯಾಲಯದಲ್ಲಿ ಡಿಸೇಂಬರ್ 13 ಮತ್ತು 14 ಈ ಎರಡು ದಿನಗಳ ಓಪನ್ ಡೇ” ಕಾರ್ಯಕ್ರಮ ಹಮ್ಮಿಕೊಂಡಿದೆ. ಮೊದಲ ದಿನವಾದ ಇಂದು ಇಲ್ಲಿನ ವಿವಿಧ ವಿಭಾಗಗಳಲ್ಲಿ ಕೋರ್ಸ್ ಗಳ ಬಗ್ಗೆ ಆಯಾ ವಿಭಾಗಗಳ ಡೀನ್ ಗಳು, ಹೆಚ್ಒಡಿ, ಪ್ರೊಫೆಸರ್ ಗಳು, ನಿರ್ದೇಶಕರು ಮಾಹಿತಿ ನೀಡಿದರು. ಅಲ್ಲದೇ ಇಲ್ಲಿನ ಶೈಕ್ಷಣಿಕ ಕಾರ್ಯಕ್ರಮಗಳ ಲಭ್ಯತೆ ಬಗ್ಗೆ ಮಾಹಿತಿ ತಿಳಿಯುವ ಕ್ಯಾಂಪಸ್ ಟೂರ್ ಹಮ್ಮಿಕೊಳ್ಳಲಾಗಿತ್ತು.

ಎಸ್ ಎಸ್ ಎಲ್ ಸಿ, ಐಟಿಐ, ಪಿಯುಸಿ, ಡಿಪ್ಲೋಮೋ ಮತ್ತು ಯಾವುದೇ ಪದವಿಯಾದ ವಿದ್ಯಾರ್ಥಿಗಳಿಗೆ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಅನುಭವಿ ಉಪನ್ಯಾಸಕರುಗಳಿಂದ ಮಾಹಿತಿ ಕೂಡ ದೊರಕಿತು. ವೃತ್ತಿಪರ ಶಿಕ್ಷಣದ ಕೋರ್ಸ್ ಗಳ ಅನುಕೂಲಗಳು ಹಾಗೂ ಪ್ಲೇಸ್ಮೆಂಟ್ ಬಗ್ಗೆ ತಿಳಿಸಲಾಗುವುದು. ಇದೇ ಸಂದರ್ಭದಲ್ಲಿ ಪ್ರೇರಕ ಭಾಷಣಕಾರರು ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದರು. ಎರಡನೇ ದಿನವಾದ ಡಿಸೇಂಬರ್ 14 ರಂದು ಈ ಎಲ್ಲ ವಿಶೇಷತೆಗಳು ಮುಂದುವರೆಯಲಿವೆ.

ಯಶಸ್ವಿ ಕಂಡ ಓಪನ್ ಡೇ:

ಓಪನ್ ಡೇ ಕಾರ್ಯಕ್ರಮವು ಯಶಸ್ವಿ ಕಂಡಿದ್ದು, ಇದಕ್ಕೆ ಮೊದಲ ದಿನವೇ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 1200 ವಿದ್ಯಾರ್ಥಿಗಳು ಆಗಮಿಸಿ ಓಪನ್ ಡೇ ವಿಶೇಷತೆ, ಉದ್ದೇಶಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದೆ ಸಾಕ್ಷಿಯಾಯಿತು.

ಎರಡು ದಿನಗಳ ಈ ಕಾರ್ಯಕ್ರಮಕ್ಕೆ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಓಪನ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು. ಅಲ್ಲದೇ ಜಿಎಂ ವಿಶ್ವವಿದ್ಯಾಲಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ತಯಾರಿಸಿದ್ದ ಪ್ರಾಜೆಕ್ಟ್ ಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಿದರು.

ಜಿಎಂ ವಿಶ್ವವಿದ್ಯಾಲಯದ ಸಹ ಕುಲಪತಿಗಳಾದ ಡಾ. ಹೆಚ್.ಡಿ. ಮಹೇಶಪ್ಪ, ಕುಲಸಚಿವರಾದ ಡಾ. ಬಿ.ಎಸ್. ಸುನಿಲ್ ಕುಮಾರ್, ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಆಡಳಿತಧಿಕಾರಿಗಳಾದ ವೈ.ಯು. ಸುಭಾಷ್ ಚಂದ್ರ, ಪ್ರಾಂಶುಪಾಲರಾದ ಡಾ. ಎಂ.ಬಿ. ಸಂಜಯ್ ಪಾಂಡೆ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಂಶುಪಾಲರು, ಡೀನ್ ಗಳು, ನಿರ್ದೇಶಕರು, ಕಾಲೇಜು ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment