SUDDIKSHANA KANNADA NEWS/ DAVANAGERE/ DATE:15-03-2024
ದಾವಣಗೆರೆ: ಕಳೆದ ೨8 ವರ್ಷದಿಂದಲೂ ಕಾರ್ಯಕರ್ತರೊಂದಿಗೆ ಒಡನಾಟವಿದೆ. ಮಾವ ಏಳು ವರ್ಷ ಸಂಸದರಾಗಿದ್ದರೆ, ಪತಿ ಡಾ. ಜಿ. ಎಂ. ಸಿದ್ದೇಶ್ವರ ಅವರು 20 ವರ್ಷ ಲೋಕಸಭಾ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ಪತಿ ಸಿದ್ದೇಶ್ವರ ಅವರು 20 ವರ್ಷ ಜನರ ಸೇವೆ, ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ಗೆದ್ದು ಬರುವೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕೆ. ಬಿ. ಬಡಾವಣೆಯ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ವಿಕಸಿತ ಭಾರತ ಮೋದಿ ಗ್ಯಾರಂಟಿ ಕುರಿತ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಷ್ಟ್ರದ ನಾಯಕರು ನನಗೆ ಅವಕಾಶ ನೀಡಿದ್ದಾರೆ. ಪ್ರತಿಯೊಬ್ಬರ ಸಹಕಾರದಿಂದ ಗೆದ್ದು ಬರಲಿದ್ದೇನೆ. ಪತಿ ಸಹಕಾರದಿಂದ ಎಲ್ಲಾ ಕೆಲಸ ಸಮರ್ಥವಾಗಿ ನಿಭಾಯಿಸುವೆ. ಮನೆ, ವ್ಯವಹಾರ, ತೋಟ ನೋಡುವುದು ನನ್ನ
ಕೆಲಸ ಆಗಿತ್ತು. ಇದೀಗ ರಾಜಕೀಯಕ್ಕೆ ನಾನೇ ಬಂದಿದ್ದೇನೆ. ಈಗ ದೇಶ ಸೇವೆಗೆ ಬಿಟ್ಟಿದ್ದಾರೆ. ಸಣ್ಣ ಕುಟುಂಬದಿಂದ ಈಗ ದೊಡ್ಡ ಕುಟುಂಬಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಜನರೆಲ್ಲಾ ನನಗೆ ಸಹಕಾರ ನೀಡಿ ಗೆಲ್ಲಿಸಿದರೆ ಇಲ್ಲಿಂದ ತಾವರೆ ಹೂ ಮುಡಿದು ಸಂಸತ್ ಗೆ ಪ್ರವೇಶಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ದೇಶದ ಜನರ ಆಶಯ ಈಡೇರುತ್ತದೆ. ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಮಾತನಾಡಿ ಬಿಜೆಪಿ ಈ ಬಾರಿ ಸಂಕಲ್ಪ ಪತ್ರ ತಯಾರಿಸುವ ಸಂಕಲ್ಪ ಹೊಂದಿದೆ. ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಿ ಅನುಷ್ಠಾನ ಮಾಡುವುದಾಗಿದೆ.
ಜನರ ಮನಸ್ಸಿನಲ್ಲಿ ಮೂಡಿಸಿ ಕಾರ್ಯರೂಪಕ್ಕೆ ತರುವುದಾಗಿದೆ ಎಂದರು.
ವಿಕಸಿತ ಭಾರತದ ಕಲ್ಪನೆ ಇದು ದೇಶಕ್ಕೆ ಸಂಬಂಧಿಸಿದ್ದಾಗಿದೆ.ಪ್ರಧಾನಿಯವರು ದೇಶವನ್ನು ಸಾಧ್ಯವದಷ್ಟೂ ಡಿಜಿಟಲ್ ಮಾಡಿದ್ದಾರೆ. ರತ ಜಗತ್ತನ್ನೇ ಮುನ್ನೆಡೆಸುವ ಮಟ್ಟಕ್ಕೆ ಬೆಳೆದಿದೆ.ಭಾರತವನ್ನು ವಿಶ್ವಗುರು ಮಾಡಲು ನಾಯಕತ್ವ ಬೇಕು. ಅಂತಹ ಪರಿಕಲ್ಪನೆಯ ನಾಯಕತ್ವ ಮೋದಿಗಿದೆ. ಮೋದಿಯವರ ಕನಸ್ಸನ್ನು ನಾವೆಲ್ಲಾ ನನಸು ಮಾಡಬೇಕಿದೆ. ನಾಲ್ಕು ವರ್ಗಗಳನ್ನು ಮೋದಿ ನೀಡಿದ್ದಾರೆ. ಮೊದಲನೆಯದು ಬಡವರು, ಎರಡನೆಯದು ಯುವಜನತೆ, ಮೂರನೆಯದು ರೈತರು ಹಾಗೂ ನಾಲ್ಕನೆಯದು ನಾರಿಶಕ್ತಿ. ಈ ನಾಲ್ಕು ವರ್ಗಕ್ಕೆ ಸಹಕಾರಿಯಾಗುವ ಮೂಲಕ ಮೋದಿ ಎಲ್ಲರನ್ನೂ ಸ್ಪರ್ಶ ಮಾಡಿದ್ದಾರೆ. ಎಲ್ಲಾ ಯೋಜನೆಗಳಿಗೆ ನಾವೆಲ್ಲಾ ಒಂದಲ್ಲಾ ಒಂದು ರೀತಿನೇರ ಫಲಾನುಭವಿಗಳಾಗಿದ್ದೇವೆ ಎಂದು ವಿವರಿಸಿದರು.
2020ರಲ್ಲಿ ಕೋವಿಡ್ ವಿರುದ್ದ ಯಶಸ್ವಿಯಾಗಿ ಮೋದಿ ಎದುರಿಸಿದ್ದಾರೆ. ವಿಶ್ವವೇ ಆಲೋಚಿಸುತ್ತಿದ್ದ ವೇಳೆ ಮೋದಿ ವಾಕ್ಸಿನ್ ತಯಾರಿಸಲು ವಿಜ್ಞಾನಿಗಳಿಗೆ ಬೆಂಬಲ ನೀಡಿ ವ್ಯಾಕ್ಸಿನ್ ತಂದರು. ಭಾರತ ವಿಸ್ಮಯದ ರೀತಿ ಕೋವಿಡ್ ಎದುರಿಸಿತು. 80ರ ದಶಕದಲ್ಲಿ 100 ರೂಪಾಯಿ ಸರ್ಕಾರದ ಅನುದಾನ ಮಧ್ಯವರ್ತಿಗಳ ಕೈಗೆ ಸಿಲುಕಿ ಫಲಾನುಭವಿಗೆ 16 ರೂ ತಲುಪುತಿತ್ತು. ಈಗ ಮೋದಿಯವರಿಂದ ನೇರ ಫಲಾನುಭವಿಗಳ ಖಾತೆಗೆ ಬರುತ್ತಿದೆ. ದೇಶ ಡಿಜಿಟಲ್ ಮಾಡಿದ್ದಾರೆ. 52 ಕೋಟಿ ಜನ್ ಧನ್ ಖಾತೆ ಭಾರತದಲ್ಲಿವೆ. ಶೂನ್ಯ ಖಾತೆ ತೆರೆದಿದ್ದಾರೆ ಎಂದು ಮಾಹಿತಿ ನೀಡಿದರು.
ಆಯುಷ್ ಮಾನ್ ಭಾರತ್ ಮೂಲಕ ಬಡವರಿಗೆ ನೆರವು ನೀಡಲಾಗುತ್ತಿದೆ. ವಿಶ್ವದಲ್ಲೇ ಇಂತಹ ಇನ್ ಶ್ಯೂರೆನ್ಸ್ ಸ್ಕೀಮ್ ಇಲ್ಲ. ಜನೌಷಧಿ ಕೇಂದ್ರದ ಮೂಲಕ ನೆರವು ನೀಡಿದ್ದಾರೆ. ಮಹಿಳೆಯರಿಗೆ ಅನೇಕ ಯೋಜನೆ ನೀಡಿದ್ದಾರೆ. ಉಜ್ವಲ ಯೋಜನೆ, ಮುದ್ರಾ ಯೋಜನೆ, ವಿಶ್ವಕರ್ಮ ಯೋಜನೆ ನೆರವು ಸಿಕ್ಕಿದೆ. ದಾಖಲೆಯ ಕೆಲಸ ಮಾಡಿದ್ದಾರೆ ಎಂದರು.
ತ್ರಿವಳಿ ತಲಾಖ್ ಮೂಲಕ ಎಲ್ಲವನ್ನೂ ನೀಡಿದ್ದಾರೆ. ಶೇ. 33 ರಷ್ಟು ಮಹಿಳಾ ಮೀಸಲಾತಿ ಮೂಲಕ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಗಾಯತ್ರಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರನ್ನು ಗೆಲ್ಲಿಸಿ ಮೋದಿ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ರಾಜ್ಯ ಪ್ರಕೋಷ್ಠ ಸಂಚಾಲಕ ದತ್ತಾತ್ರೇಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಜಿಲ್ಲಾ ವಕ್ತಾರ ಶಿವಶಂಕರ್, ಸತೀಶ್ ಎಂ. ಕೊಳೇನಹಳ್ಳಿ ಮತ್ತಿತರರು ಹಾಜರಿದ್ದರು.