SUDDIKSHANA KANNADA NEWS/ DAVANAGERE/ DATE:11-06-2024
ಬೆಂಗಳೂರು: 2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಂದು ಕಾಲೇಜು ಶಿಕ್ಷಣ ಇಲಾಖೆ ಕಚೇರಿಯ ಗೇಟ್ ಬಂದ್ ಮಾಡಲಾಗಿದೆ.
ನೇಮಕಾತಿ ಆದೇಶ ಪ್ರತಿಯ ವಿಳಂಬದಿಂದಾಗಿ, ಆದೇಶದ ಗೆಜೆಟ್ ಬೇಡಿಕೆಗಾಗಿ ಮೌನವಾಗಿ ಕಚೇರಿಯ ಹೊರಾಂಗಣದಲ್ಲಿ ಕುಳಿತು ಪ್ರತಿಭಟಿಸುತ್ತಿದ್ದ ಅಭ್ಯರ್ಥಿಗಳು ಗೇಟ್ ಒಳಗೆ ಬರದಂತೆ ಮುಚ್ಚಲಾಗಿದೆ.
ಕಚೇರಿಯ ಮುಖ್ಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಮುಚ್ಚಲಾಗಿದೆ ಎಂದು ತಿಳಿದುಬಂದಿದೆ. ನಿನ್ನೆಯ ದಿನ ನೂರಾರು ಅಭ್ಯರ್ಥಿಗಳ ಧರಣಿಯಿಂದ ಮುಜುಗರಕ್ಕೆ ಒಳಗಾದ DCE ಇಂದು ಈ ನಿರ್ಧಾರವನ್ನು ಕೈಗೊಂಡಿದೆ.
ಇದನ್ನು ಅರಿತ ನೂರಾರು ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ರಸ್ತೆಯ ಪುಟ್ ಬಾತ್ ಮೇಲೆಯೇ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.