ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕ್ಯಾನ್ಸರ್ ನಂತೆ ಹರಡುತ್ತಿರುವ ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ, ಅಭಿವೃದ್ಧಿಗೆ ಮಾರಕ: ಜಿ. ಬಿ. ವಿನಯ್ ಕುಮಾರ್ ಪ್ರತಿಪಾದನೆ

On: November 24, 2024 12:54 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:24-11-2024

ದಾವಣಗೆರೆ: ದೇಶದಲ್ಲಿ ಕುಟುಂಬ ರಾಜಕಾರಣ ಆಳವಾಗಿ ಬೇರೂರುತ್ತಿದೆ. ಕ್ಯಾನ್ಸರ್ ನಂತೆ ಹರಡುತ್ತಿರುವ ಕುಟುಂಬ ರಾಜಕಾರಣ ಮಾರಕ ಅಷ್ಟೇ ಅಲ್ಲ, ಪ್ರಜಾಪ್ರಭುತ್ವ, ಅಭಿವೃದ್ಧಿ, ಸಮಾನತೆಗೆ ಮಾರಕವಾದದ್ದು. ಇದರಿಂದ ಅಸಮಾನತೆ ಜಾಸ್ತಿಯಾಗುತ್ತದೆ. ಅಭಿವೃದ್ಧಿ, ಅಧಿಕಾರ, ಸಂಪತ್ತು ವಿಕೇಂದ್ರೀಕರಣ ಆಗಲ್ಲ. ಎಲ್ಲವನ್ನೂ ಕುಟುಂಬ ನಿಯಂತ್ರಿಸುವುದರಿಂದ ಭವಿಷ್ಯದಲ್ಲಿ ದೊಡ್ಡ ಅಪಾಯ ಎದುರಿಸುವಂಥ ಸನ್ನಿವೇಶ ಬರಲಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಕೇವಲ ಒಂದು ಅಥವಾ ಎರಡು ಕ್ಷೇತ್ರಗಳಲ್ಲಿ ಮಾತ್ರ ಕುಟುಂಬ ರಾಜಕಾರಣವಿಲ್ಲ. ದೇಶಾದ್ಯಂತ ಕುಟುಂಬ ರಾಜಕಾರಣ ಹರಡುತ್ತಿದೆ. ಇದರಿಂದಾಗಿ ಕುಟುಂಬಗಳೇ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳನ್ನು ನಿಯಂತ್ರಿಸಿ ಜನರ
ದನಿಯನ್ನೇ ಅಡಗಿಸುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕಿದೆ. ಈ ನಿಟ್ಟಿನಲ್ಲಿ ಯುವಕರು, ಯುವತಿಯರು, ವಿದ್ಯಾವಂತರು ಸೇರಿದಂತೆ ಎಲ್ಲಾ ವರ್ಗದವರು ಗಂಭೀರವಾಗಿ ಆಲೋಚಿಸಬೇಕಾದ ಅವಶ್ಯಕತೆ ಇದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ.

ಚುನಾವಣೆ ಬಂದರೆ ಸಾಕು ಜನರ ಸಮಸ್ಯೆಗಳು, ಕುಡಿಯುವ ನೀರು, ಸಮಾನತೆ, ಉದ್ಯೋಗ, ಅವಕಾಶ ಸೃಷ್ಟಿಸುವ ಕುರಿತಂತೆ ಪಕ್ಷಗಳು ಮಾತನಾಡುತ್ತಿಲ್ಲ. ಚುನಾವಣೆಗಳು ಕುಟುಂಬಗಳ, ದೊಡ್ಡ ವ್ಯಕ್ತಿಯ ಪ್ರತಿಷ್ಠಾ ಕಣಗಳಂತಾಗಿವೆ. ಪ್ರತಿಷ್ಠೆ ಉಳಿಸುವುದಕ್ಕೋಸ್ಕರ ಮತ ಖರೀದಿ ಮಾಡುವ ಕೆಲಸ ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಕೆಲಸವೂ ಸಿಗಲ್ಲ. ಯಾಕೆಂದರೆ ಅಧಿಕಾರದಲ್ಲಿರುವ ಕುಟುಂಬಗಳು ಎಲ್ಲವನ್ನೂ ನಿಯಂತ್ರಣ ಮಾಡುವಷ್ಟು ಬಲಿಷ್ಠವಾಗಿರುತ್ತವೆ. ರಾಜಕಾರಣದಲ್ಲಿ ಹೊಸಬರು, ವಿದ್ಯಾವಂತರಿಗೆ ಅವಕಾಶ ಸಿಗಬೇಕು. ಇಂಥವರು ದುಡ್ಡು ಕೇಳಲ್ಲ, ಸಂಪನ್ಮೂಲ ಕೇಳಲ್ಲ. ಇಂಥವರನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

ಪ್ರತಿಭಾವಂತ, ನಿಷ್ಠಾವಂತ, ತಳಮಟ್ಟದ ಕಾರ್ಯಕರ್ತರಿಗೆ ಸಾಯುವವರೆಗೆ ಅವಕಾಶ ಸಿಗಲ್ಲ. ಪ್ರಜಾಪ್ರಭುತ್ವದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸ್ವಾತಂತ್ರ್ಯ ಇರಬೇಕು. ರಾಜಕಾರಣದಲ್ಲಿ ಮೇಲೆ ಬರಲು, ಆರ್ಥಿಕ, ಸಾಮಾಜಿಕವಾಗಿ ಮುನ್ನಲೆಗೆ ಬರಬೇಕು. ಆದರೆ ಇದಕ್ಕೆ ಕುಟುಂಬ ರಾಜಕಾರಣ ಅವಕಾಶ ನೀಡುತ್ತಿಲ್ಲ. ಹೊಸ ಉದ್ಯಮಗಳು ಬರಲ್ಲ, ಹೂಡಿಕೆ ಹೆಚ್ಚಾಗಲ್ಲ, ವ್ಯಾಪಾರೋದ್ಯಮಕ್ಕೂ ಅವಕಾಶ ನೀಡಲ್ಲ. ಇದು ಒಂದೇ ಕುಟುಂಬಕ್ಕೆ ಸೀಮಿತವಾಗಿಬಿಡುತ್ತದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ಗುಲಾಮಗಿರಿ ವ್ಯವಸ್ಥೆಗೆ ಹೋಗುವ ಭಯಭೀತ ವಾತಾವರಣ ನಿರ್ಮಾಣ ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕುಟುಂಬ ರಾಜಕಾರಣದಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಸೌಲಭ್ಯ, ಅಭಿವೃದ್ಧಿ ಬೇಕಾದರೆ ಅವರ ಮನೆ ಮುಂದೆ ಹೋಗಿ ಕೈ ಕಟ್ಟಿ ಕೂರಬೇಕು. ಕೊಡಲ್ಲ ಎಂದರೂ ಏನೂ ಮಾಡಲು ಆಗಲ್ಲ. ಕುಟುಂಬಗಳು ಬಲಿಷ್ಠವಾಗಿ ರಾಜಕೀಯವನ್ನು ನಿಯಂತ್ರಿಸುತ್ತಿವೆ. ತನ್ನ ಮಕ್ಕಳು, ಮೊಮ್ಮಕ್ಕಳಿಗೆ ಟಿಕೆಟ್ ಸಿಗಬೇಕು. ಬೇರೆಯವರಿಗೆ ಸಿಗಬಾರದು ಎಂಬ ಮನೋಭಾನೆ ಹೊಂದಿರುತ್ತಾರೆ. ದೊಡ್ಡ ರಾಜಕೀಯ ನಾಯಕರು ಬೇರೆ ಬೇರೆ ಪಕ್ಷಗಳ ಜೊತೆ ವ್ಯಾಪಾರ, ವಿವಾಹ ಸಂಬಂಧ ಬೆಳೆಸಿಕೊಂಡು ಒಳಒಪ್ಪಂದ ಮಾಡಿಕೊಂಡಿರುತ್ತಾರೆ. ಆದರೆ ಜನರಿಗೆ ಇದು ಗೊತ್ತಾಗುವುದೇ ಇಲ್ಲ. ಇದು ಜಾಸ್ತಿಯಾಗುವುದಕ್ಕೆ ಬಿಟ್ಟರೆ ಪ್ರಜಾಪ್ರಭುತ್ವಕ್ಕೆ ಮನ್ನಣೆ ಇಲ್ಲದಂತೆ ಮಾಡಿಬಿಡಲಾಗುತ್ತದೆ. ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ಜಿ. ಬಿ. ವಿನಯ್ ಕುಮಾರ್ ಕರೆ ನೀಡಿದ್ದಾರೆ.

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment