SUDDIKSHANA KANNADA NEWS/ DAVANAGERE/ DATE:28-11-2024
ದಾವಣಗೆರೆ: ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಟಿ. ಜಿ. ರವಿಕುಮಾರ್ ಅವರು, ಇತ್ತೀಚಿನ ದಿನಗಳಲ್ಲಿ ವಯೋವೃದ್ಧರಿಗೆ ಆರೋಗ್ಯದ ಸಮಸ್ಯೆ ತೀವ್ರವಾಗಿ ಕಾಣಿಸುತ್ತಿದ್ದು, ನಿಯಮಿತವಾಗಿ ಅವರ ಆರೋಗ್ಯ ತಪಾಸಣೆಯನ್ನು ಮತ್ತು ಚಿಕಿತ್ಸೆ ನೀಡಬೇಕು ಎಂದು ಹೇಳಿದರು.
ಮುಂಜಾಗ್ರತೆಯಿಂದ ವಯೋ ವೃದ್ಧರ ಅನಾರೋಗ್ಯಗಳನ್ನು ತಡೆಗಟ್ಟಿ ಆರೋಗ್ಯವಂತ ಜೀವನವನ್ನು ಕೊನೆಯವರೆಗೂ ಕಲ್ಪಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ವೇಳೆ ಜಗಳೂರಿನ ಮಾಜಿ ಶಾಸಕ ಟಿ. ಗುರುಸಿದ್ದನಗೌಡ್ರು ಹಾಗೂ ಊರಿನ ಮುಖಂಡರಾದ ನಾಗನಗೌಡ, ಹಾಲಪ್ಪ, ಮಂಜುನಾಥ್, ,ಸತೀಶ್ ಗೋಕುಲ ಹಟ್ಟಿ, ಉದ್ಯಮಿ ನಾಗರಾಜ್ ಸ್ವಾಮಿ, ನವೀನ್ ನಿಬಗೂರು, ಡಾ. ಕಲ್ಲೇಶ್, ಡಾ. ಕಾರ್ತಿಕ್, ಹಿರಿಯ ಗ್ರಾಮಸ್ಥರು ಉಪಸ್ಥಿತರಿದ್ದರು.