SUDDIKSHANA KANNADA NEWS/ DAVANAGERE/ DATE:15-02-2025
ದಾವಣಗೆರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶ್ರೀಸಿದ್ಧಗಂಗಾ ಸ್ಥಳೀಯ ಸಂಸ್ಥೆ, ದಾವಣಗೆರೆ ಜಿಲ್ಲಾಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸಹಯೋಗದೊಂದಿಗೆ ಪುಲ್ವಾಮಾ ದಿನಾಚರಣೆ ಆಚರಿಸಲಾಯಿತು.
ಜಸ್ಟಿನ್ ಡಿಸೋಜಾ ಅವರು ಸ್ಕೌಟ್ ಗೈಡ್ ಮಕ್ಕಳಿಗೆ ಪುಲ್ವಾಮಾದಲ್ಲಿ ನಡೆದ ಹೃದಯವಿದ್ರಾವಕ ಘಟನೆಯ ಬಗೆಗೆ ವಿವರಿಸಿದರು. ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರನ್ನು ನೆನೆದರು.
ನಂತರ ದಾವಣಗೆರೆಯ ಅಮರ್ ಜವಾನ್ ಉದ್ಯಾನವನಕ್ಕೆ ತೆರಳಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಂದ ಪುಷ್ಪನಮನ ಸಲ್ಲಿಸಲಾಯಿತು. ಸುಬೇದಾರ್ ಮಲ್ಲನಗೌಡ ಪಾಟಿಲ್ ರವರು ಪುಲ್ವಾಮ ದಾಳಿಯಲ್ಲಿ ಪ್ರಾಣತೆತ್ತ ಸೈನಿಕರ ಬಗೆಗೆ ಮಾಹಿತಿನೀಡಿ ಸ್ಕೌಟ್ ಗೈಡ್ ಮಕ್ಕಳಲ್ಲಿನ ದೇಶಪ್ರೇಮಾಭಿಮಾನವನ್ನು ಕಂಡು ಸಂತಸಪಟ್ಟರು.
ಈ ಸಂಧರ್ಭದಲ್ಲಿ ಜಿಲ್ಲಾಸಂಸ್ಥೆಯ ಪದಾದಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಯ ಶ್ರೀನಿವಾಸ್ ಎನ್. ಎಲ್. ಉಪಸ್ಥಿತರಿದ್ದರು.