SUDDIKSHANA KANNADA NEWS/ DAVANAGERE/ DATE:25-03-2025
ದಾವಣಗೆರೆ: ಕಾಂಗ್ರೆಸ್ ಯುವ ನಾಯಕ, ಪ್ರಥಮ ದರ್ಜೆ ಗುತ್ತಿಗೆದಾರ ಸುರೇಶ್ ಪೈ ಅವರು ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದ ಘಟನೆ ನಗರದ ಬಿಐಇಟಿ ಕಾಲೇಜು ರಸ್ತೆಯಲ್ಲಿರುವ ಶ್ರೀ ಈಶ್ವರ ಧ್ಯಾನ ಮಂದಿರ ಬಳಿ ಸೋಮವಾರ ರಾತ್ರಿ 9 ಗಂಟೆಗೆ ನಡೆದಿದೆ.
ಸುರೇಶ್ ಪೈ ಅವರು ದಿವಂಗತ ಕನ್ನಯ್ಯ ಮತ್ತು ತಾಯಿ ನಲ್ಕುದುರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ, ಹಾಲಿ ಸದಸ್ಯರೂ ಆದ ಪದ್ಮಮ್ಮ ದಂಪತಿ ಪುತ್ರ. ಪುತ್ರರು ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಬಳಗದವರನ್ನು
ಅಗಲಿದ್ದಾರೆ.
ತಾವೇ ಕಾರು ಚಲಾಯಿಸುತ್ತಿದ್ದಾಗ ಸುರೇಶ್ ಪೈ ಅವರಿಗೆ ಲೋ ಬಿಪಿ ಆಗಿದೆ. ಆ ಬಳಿಕ ಹೃದಯಘಾತಕ್ಕೊಳಗಾಗಿ ನಿಯಂತ್ರಣ ತಪ್ಪಿದೆ. ರಸ್ತೆ ಬದಿಯ ಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರ ಎದೆಗೆ ಸ್ಟೇರಿಂಗ್ ಬಲವಾಗಿ ಬಡಿದಿದೆ ಎಂದು ತಿಳಿದು ಬಂದಿದೆ.
ಸಿ. ಜೆ. ಆಸ್ಪತ್ರೆಗೆ ಪಾರ್ಥಿವ ಶರೀರ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆ ಮುಗಿದಿದ್ದು, ಸ್ಥಳೀಯ ಬನಶಂಕರಿ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಧ್ಯಾಹ್ನ 1 ಗಂಟೆಯವರೆಗೆ ಚನ್ನಗಿರಿ ತಾಲೂಕಿನ ನಲ್ಕುದುರೆ ಗೋಮಾಳದಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೃತರ ಕುಟುಂಬ ವರ್ಗದವರು ತಿಳಿಸಿದ್ದಾರೆ.
ಸುರೇಶ್ ಪೈ ನಿಧನಕ್ಕೆ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಯುವ ಘಟಕ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.