SUDDIKSHANA KANNADA NEWS/ DAVANAGERE/ DATE:14-04-2025
ಚಿತ್ರದುರ್ಗ: ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನೋತ್ಸವವನ್ನು ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಗ್ರಾಮದ ತುರೆಬೈಲು ಕಾಲೋನಿಯ ಭೀಮ್ ಸರ್ಕಲ್ ಬಳಿ ಆಚರಿಸಲಾಯಿತು.
ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಮಾಜಿ ಸೈನಿಕರಾದ ದಾದಾಪೀರ್ ಅವರನ್ನು ಶಾಲು ಹಾಗೂ ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು.
ಗ್ರಾಮದ ಮಾಜಿ ಸೈನಿಕ ದಾದಾಪೀರ್ ಮಾತನಾಡಿ ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಿ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನದ ಬಗ್ಗೆ ಗೌರವ ತರುವಂತಹ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ನಮಗೆ ಒಂದು ಆದರ್ಶ ವ್ಯಕ್ತಿ. ಇಂದಿನ ಮಕ್ಕಳು ಅಂಬೇಡ್ಕರ್ ಅವರ ಜೀವನಚರಿತ್ರೆ, ಬರೆದಿರುವ ಪುಸ್ತಕಗಳನ್ನು ಓದಿ ಸಮಾಜದಲ್ಲಿ ಒಬ್ಬ ಉನ್ನತ ವ್ಯಕ್ತಿಯಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ್, ಮಂಜುನಾಥ್, ದೇವರಾಜ್ ತಿಪ್ಪೇಸ್ವಾಮಿ, ಸುರೇಶ್, ಶಿವರಾಜ್, ಮಣಿಕಂಠ, ಪರಮೇಶ್, ರಾಮ, ಲಕ್ಷ್ಮಣ, ಅರುಣ, ದಿನೇಶ್, ದಿಲೀಪ್, ಸಂದೀಪ್ ಮತ್ತಿತರರು ಹಾಜರಿದ್ದರು.