SUDDIKSHANA KANNADA NEWS/ DAVANAGERE/ DATE:22-08-2024
ಬಳ್ಳಾರಿ: ಇಲ್ಲಿಯ ಜಯನಗರದ ಶ್ರೀನಿವಾಸ್ ಅಪಾರ್ಟಮೆಂಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಅಜ್ಮೀರ್ ಯಾತ್ರೆಗೆ ಹೋಗಿಬರುತ್ತೇನೆ ಎಂದು ಹೇಳಿಹೋದವರು ಮರಳಿ ಬಂದಿಲ್ಲ.
ಅಜ್ಮೀರ್ ಯಾತ್ರೆಗೆ ಹೋದವರು ಬಾರದೇ ಜು.7 ರಂದು ಕಾಣೆಯಾಗಿರುವ ಕುರಿತು ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಕಾಣೆಯಾದವರ ಚಹರೆ ಗುರುತು: ಎಂ.ಎಸ್.ನಜೀರ್ ಅಹಮದ್ (50 ವರ್ಷ), ಎತ್ತರ 5 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ದೃಢವಾದ ಮೈಕಟ್ಟು ಹೊಂದಿರುತ್ತಾನೆ. ಮುನಿಯಾರ್ ರೊಖಾಯಾ (47 ವರ್ಷ), ಅಂದಾಜು ಎತ್ತರ 5.2 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ದೃಢವಾದ ಮೈಕಟ್ಟು. ಎಂ.ಎಸ್.ಸಾನಿಯ ಕೌಸರ್ (21 ವರ್ಷ), ಎತ್ತರ 5.2 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು.
ಶಗುಪ್ತ ಅಂಜುಮ್ (15 ವರ್ಷ), ಎತ್ತರ 5.2 ಅಡಿ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು. ಮೇಲ್ಕಂಡವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೌಲ್‌ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145, ಪಿ.ಐ ಮೊ.9480803047, ಪಿಎಸ್‌ಐ ಮೊ.94808203085 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.