SUDDIKSHANA KANNADA NEWS/ DAVANAGERE/ DATE:16-02-2025
ದಾವಣಗೆರೆ: ಸ್ವಾಭಿಮಾನಿ ಬಳಗವು ಆಯೋಜಿಸಿದ್ದ “ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ?” ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಯದೇವ ವೃತ್ತದಲ್ಲಿರುವ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ, ಸ್ಮರಣಿಕೆ, ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
ಮೂರು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರಥಮ ಬಹುಮಾನ ಮೂವರಿಗೆ ತಲಾ 20 ಸಾವಿರ ರೂಪಾಯಿ, ದ್ವಿತೀಯ ಬಹುಮಾನ ಮೂವರಿಗೆ ತಲಾ 10 ಸಾವಿರ ರೂಪಾಯಿ ಹಾಗೂ ತೃತೀಯ ಬಹುಮಾನ 5 ಸಾವಿರ ರೂಪಾಯಿ ಪ್ರದಾನ ಮಾಡಲಾಯಿತು.
ಪ್ರಥಮ ವಿಭಾಗದಲ್ಲಿ ದಾವಣಗೆರೆಯ ಎಸ್ಎಸ್ಆರ್ ಎಲ್ ಶಾಲೆಯ ಎಂ. ಪ್ರಾರ್ಥನಾ ಪ್ರಥಮ, ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ದಾದಾಪುರ ಗ್ರಾಮದ ಎಂ. ಪಿ. ಬೀರೇಶ ದ್ವಿತೀಯ ಹಾಗೂ ಹಳೇ ಓಬಳಾಪುರದ ಸಕ್ರಪ್ಪರ ಸಂಗೀತ ಹಾಗೂ ಜಿಟ್ಟಿನಕಟ್ಟೆಯ ಸಹನಾ ತೃತೀಯ ಬಹುಮಾನ ಪಡೆದಿದ್ದಾರೆ.
ದ್ವಿತೀಯ ವಿಭಾಗದಲ್ಲಿ ಚನ್ನಗಿರಿ ತಾಲೂಕಿನ ಕಣಿವೆಬಿಳಚಿಯ ಹೊಸಹೊಳ್ಳಿ ಗ್ರಾಮದ ಎಸ್. ಕೊಟ್ರೇಶ ಪ್ರಥಮ, ಬೆಳಲೆಗೆರೆ ಗ್ರಾಮದ ಅಕ್ಷತಾ ಕೆ. ಡಿ. ದ್ವಿತೀಯ ಹಾಗೂ ಚಿರಡೋಣಿ ಗ್ರಾಮದ ಎಸ್. ಎಂ. ಹಾಲಪ್ಪ, ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದ ಎಂ. ಎಸ್. ಸೌಂದರ್ಯ, ದಾವಣಗೆರೆಯ ಗುಬ್ಬೇರಕಣದ ಎಸ್. ಅಶ್ವಿನಿ, ಹರಿಹರ ತಾಲೂಕಿನ ಕುಂಬಳೂರು ಗ್ರಾಮದ ನಿಂಗಾಚಾರಿ, ಜಗಳೂರು ತಾಲೂಕಿನ ಕ್ಯಾಸೇನಹಳ್ಳಿಯ ಜೆ. ಬಿ. ಅನಿಲ್ ಕುಮಾರ್, ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದ ಬಿ. ಪ್ರಿಯಾಂಕಾ ತೃತೀಯ ಸ್ಥಾನಕ್ಕೆ ಪಾತ್ರರಾಗಿದ್ದಾರೆ.
ಮೂರನೇ ವಿಭಾಗದಲ್ಲಿ ಕೆ. ಬಿ. ಬಡಾವಣೆಯ ಹಳೇ ಪೋಸ್ಟ್ ಆಫೀಸ್ ಹಿಂಭಾಗದ ಸುಮಾ ರಾಜೇಶ ಪ್ರಥಮ, ಕಡ್ಲೇಬಾಳು ಗ್ರಾಮದ ಹೆಚ್. ಬಸವರಾಜ್ ದ್ವಿತೀಯ, ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದ ಹೆಚ್. ಎ. ವಿದ್ಯಾ, ಹರ್ಲಾಪುರ ಗ್ರಾಮದ ಅಶೋಕ ಹಾಗೂ ಕೆ. ಬಿ. ಬಡಾವಣೆಯ ಕೆ. ಎಂ. ಶ್ವೇತಾ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಪ್ರಶಸ್ತಿ ಪ್ರದಾನ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ವಿ. ಪಟೇಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಹೆಚ್. ಅರುಣ್ ಕುಮಾರ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್, ವಕೀಲರಾದ ಸಿ. ಪಿ. ಅನಿತಾ, ಚಿತ್ರನಿರ್ದೇಶಕರು ಹಾಗೂ ಉಪನ್ಯಾಸಕ ಮಾರುತಿ ಶಾಲೆಮನೆ, ಎಸ್. ಎಂ. ಕೃಷ್ಣ ಕಾಲೇಜಿನ ಪ್ರಾಂಶುಪಾಲ ಕೆ. ಎಸ್. ಗಂಗಾಧರ್, ಗುರುದೇವ ಬಳುಂಡಗಿ ಮತ್ತಿತತರರು ಹಾಜರಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದವರು, ಪೋಷಕರು, ಸ್ವಾಭಿಮಾನಿ ಬಳಗದ ಪದಾಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.