SUDDIKSHANA KANNADA NEWS/ DAVANAGERE/ DATE:21-08-2024
ದಾವಣಗೆರೆ: ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ನಂ 43 ರಲ್ಲಿ ಬರುವ ಜೆ. ಹೆಚ್.ಪಟೇಲ್ ಬಡಾವಣೆಯ ಆಸ್ತಿಗಳನ್ನು ದಾ-ಹ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹಾನಗರ ಪಾಲಿಕೆ ಹಸ್ತಾಂತರಗೊಂಡಿವೆ.
ಈ ಆಸ್ತಿಗಳ ಆಸ್ತಿ ತೆರಿಗೆ ಮತ್ತು ಡೋರ್ ನಂಬರ್ ನೋಂದಣಿ ಶುಲ್ಕ ಪಾವತಿಸಿಕೊಂಡು ಇ-ಸ್ವತ್ತು ನೀಡುವ ಕಾರ್ಯಕ್ರಮವನ್ನು ಆಗಸ್ಟ್ 27 ರಿಂದ ಸೆ.26 ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಜೆ.ಹೆಚ್ ಪಟೇಲ್ ಬಡಾವಣೆಯ ಬಾಲಭವನದಲ್ಲಿ ನಡೆಸಲಾಗುತ್ತದೆ. ಈ ಬಡಾವಣೆಗೆ ಸಂಬಂಧಿಸಿದ ಆಸ್ತಿ ಮಾಲೀಕರು ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.