SUDDIKSHANA KANNADA NEWS/ DAVANAGERE/ DATE:17-02-2025
ಬೆಂಗಳೂರು: ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ತೂಗುದೀಪ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಆದ್ರೂ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಮುಕ್ತಿ ಸಿಕ್ಕಿಲ್ಲ. ದರ್ಶನ್ ತೂಗುದೀಪ ಅವರಿಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಸಂಕಷ್ಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ.
ದರ್ಶನ್ ತೂಗುದೀಪ ಅವರು ಸುಪ್ರೀಂಕೋರ್ಟ್ ನಲ್ಲಿ ಜಾಮೀನು ಪಡೆಯಲು ತಂತ್ರಗಾರಿಕೆ ರೂಪಿಸಿದ್ದಾರೆ. ಜೊತೆಗೆ ಹಿರಿಯ ವಕೀಲರ ಮೊರೆ ಹೋಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಹಿರಿಯ ವಕೀಲ ಕಪಿಲ್ ಸಿಬಲ್ ದರ್ಶನ್ ಪರ ವಾದ ಮಾಡುತ್ತಾರೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಕೊಟ್ಟಿತ್ತು. ಬಳಿಕ ಜಾಮೀನು ವಜಾಗೊಳಿಸಲು ಸುಪ್ರೀಕೋರ್ಟ್ ಮೆಟ್ಟಿಲೇರಿ ಪೊಲೀಸ್ ಇಲಾಖೆಯು ಸಕಲ ಪ್ರಯತ್ನ ಮುಂದುವರಿಸಿದೆ. ಇದು ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡರಿಗೆ ಆತಂಕ ತರುವಂತೆ ಮಾಡಿದೆ. ಹಾಗಾಗಿ, ದರ್ಶನ್ ಕುಟುಂಬ ಕಪಿಲ್ ಸಿಬಲ್ ರನ್ನು ಸಂಪರ್ಕ ಮಾಡಿದೆ. ಜೊತೆಗೆ ಪ್ರಕರಣ ಸಂಬಂಧ ಭೇಟಿಯಾಗಿ ಚರ್ಚೆ ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸುಪ್ರೀಂನಲ್ಲಿ ಮಾರ್ಚ್ 18ಕ್ಕೆ ದರ್ಶನ್ ಅರ್ಜಿ ವಿಚಾರಣೆಗೆ ಬರಲಿದೆ. ಅಂದು ಕಪಿಲ್ ಸಿಬಲ್ ವಾದ ಮಂಡಿಸುವ ಸಾಧ್ಯತೆ ಹೆಚ್ಚಿದೆ ಎಂದು ದರ್ಶನ್ ಕುಟುಂಬದ ಮೂಲಗಳು ತಿಳಿಸಿವೆ. ಹೈಕೋರ್ಟ್ ನಲ್ಲಿ ರಿಲೀಫ್ ಪಡೆದಂತೆ ಸುಪ್ರೀಂನಲ್ಲಿಯೂ
ಪಡೆಯಲು ದರ್ಶನ್ ಮತ್ತವರ ಕುಟುಂಬವು ಪ್ರಯತ್ನ ಮುಂದುವರಿಸಿದೆ.
ಸುಪ್ರೀಂನಲ್ಲಿ ಜಾಮೀನು ವಜಾಕ್ಕಾಗಿ ಅರ್ಜಿ ಸಲ್ಲಿಸಿರೋ ಪೊಲೀಸರು ಆರೋಪಿಗಳ ಜಾಮೀನು ತೆಗೆಯಲು ಪ್ರಯತ್ನಿಸಿ ದರ್ಶನ್ , ಪವಿತ್ರ ಸೇರಿದಂತೆ ಏಳು ಮಂದಿಯ ಜಾಮೀನು ವಜಾಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ದರ್ಶನ್ ನಿಂದ ಸುಪ್ರೀಂ ನಲ್ಲಿ ವಾದಿಸಲು ಹಿರಿಯ ನುರಿತ ವಕೀಲರ ನೇಮಕ ಮಾಡಲು ತಯಾರಿ ನಡೆದಿದೆ.







