SUDDIKSHANA KANNADA NEWS/ DAVANAGERE/ DATE:27-02-2025
ಬೆಂಗಳೂರು: ಕೆಪಿಎಸ್ ಸಿಯ ಭ್ರಷ್ಟ ವ್ಯವಸ್ಥೆಯಿಂದಾಗಿ ಲಕ್ಷಾಂತರ ಪದವೀಧರರು ಅವಕಾಶ ವಂಚಿತರಾಗುತಿದ್ದಾರೆ. ಪದೇ ಪದೇ ತಪ್ಪುಗಳನ್ನು ಮಾಡುವ ಮೂಲಕ ರಾಜ್ಯದ ವಿದ್ಯಾಂವಂತ ವರ್ಗದ ವಿಶ್ವಾಸಾರ್ಹತೆಯನ್ನು ಕೆಪಿಎಸ್ ಸಿಯನ್ನು ಕಳೆದುಕೊಂಡಿದೆ. ಕೆಪಿಎಸ್ ಸಿ ಕ್ಯಾನ್ಸರ್ ನ ಅಂತಿಮ ಹಂತ ತಲುಪಿದೆ. ಇದಕ್ಕೆ ಮೇಜರ್ ಸರ್ಜರಿ ಬೇಕಿದೆ. ತುರ್ತಾಗಿ ಸರಿಪಡಿಸದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಕೂಡಲೇ ಕೆಪಿಎಸ್ ಸಿ ನೇಮಕಾತಿ ಸಂಬಂಧ ಮರು ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಕೆಪಿಎಸ್ ಸಿ ಸರಿಪಡಿಸದೇ ಇರಲು, ಲೋಪದೋಷಗಳು ಪದೇ ಪದೇ ಆಗುತ್ತಿರುವುದಕ್ಕೆ ಸರ್ಕಾರದ ಇಚ್ಚಾಶಕ್ತಿ ಕೊರತೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸೆಂಬರ್ 29ರಂದು ನಡೆದ ಮರುಪರೀಕ್ಷೆಯಲ್ಲಿ ಎರಡನೇ ಬಾರಿಗೆ ಕನ್ನಡ ಭಾಷಾಂತರ ಲೋಪ ಎಸಗಿಲಾಗಿದ್ದು, ಈ ಸಂಬಂಧ ರಾಜ್ಯದ ಇತರೆ ವಿದ್ಯಾರ್ಥಿ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ವೇಳೆ ಸರ್ಕಾರ ಎರಡು ದಿನಗಳ ಕಾಲಾವಾಶವನ್ನು ಪಡೆದುಕೊಂಡಿತ್ತು. ಇದಾದ ಬಳಿಕ 9 ದಿನ ಕಳೆದರೂ ಸರ್ಕಾರ ಮೌನ ವಹಿಸಿಸಿದೆ. ಈ ಜಾಣ ಮೌನ ಮುರಿದು ಸಮಸ್ಯೆ ಸರಿಪಡಿಸದಿದ್ದರೆ ರಾಜ್ಯದ ಜನತೆ ದಂಗೆ ಏಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಕೆಪಿಎಸ್ ಸಿಯಿಂದ ರಾಜ್ಯದ ಜನತೆಗೆ ತುಂಬಾ ಅನ್ಯಾಯವಾಗಿದೆ. ಸಂಸ್ಥೆಯ ಮೇಲೆ ನಂಬಿಕೆ ಬರುವಂತ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಬೇಕು. ಯುಪಿಎಸ್ ಸಿ ಮಾದರಿಯನ್ನು ಕೆಪಿಎಸ್ ಸಿ ಅನುಸರಿಸಬೇಕು. ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಕೆಪಿಎಸ್ ಸಿ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಬೇಕು ವಿಶೇಷ ಭಾಷಾಂತರ ಶಾಖೆಯನ್ನು ಹೊಂದಬೇಕು. ನೇಮಕಾತಿ ಸಂಬಂಧ ವಾರ್ಷಿಕ ಕ್ಯಾಲೆಂಡರ್ ಹೊರಡಿಸಬೇಕು. ನೇಮಕಾತಿ ಪ್ರಕ್ರಿಯೆಯನ್ನು ನಿಗಧಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿ. ಬಿ. ವಿನಯ್ ಕುಮಾರ್ ಅವರು ಸಲಹೆ ನೀಡಿದರು.
ಗೋಷ್ಠಿಯಲ್ಲಿ ಅಕ್ಸರ ಸಂಘಟನೆ ಅಧ್ಯಕ್ಷ ಸಂತೋಷ್ ಮರೂರು, ಕಾರ್ಯಾಧ್ಯಕ್ಷ ಲೋಕೇಶ್ ರಾಮ್, ಪ್ರಧಾನ ಕಾರ್ಯದರ್ಶಿ ಪವನ್ ಮಹಾರಾಜ್, ಮಹಿಳಾ ಕಾರ್ಯದರ್ಶಿ ಪವಿತ್ರಾ ಕೋಲಾರ ಮತ್ತಿತರರು ಉಪಸ್ಥಿತರಿದ್ದರು.