SUDDIKSHANA KANNADA NEWS/ DAVANAGERE/ DATE:07-03-2025
ದಾವಣಗೆರೆ: ಪಂಪ್ ಸೆಟ್ ಗಳ ಸಂಪರ್ಕಕ್ಕೆ ತಗಲುವ ವೆಚ್ಚವನ್ನು ರೈತರೇ ಭರಿಸಬೇಕು ಎಂದು ಹೇಳುವ ಈ ಕಾಂಗ್ರೆಸ್ ಸರ್ಕಾರ ತಲಾ ಪಂಪ್ ಸೆಟ್ ಅಳವಡಿಸಲು 50 ಸಾವಿರ ಧನಸಹಾಯ ಎಂದು ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳ್ ತಿಳಿಸಿದ್ದಾರೆ.
ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆ ಮೆಕ್ಕೆಜೋಳ ಸಂಸ್ಕರಣೆ ಘಟಕದ ಪ್ರಸ್ತಾವ ಇಲ್ಲ. ಆವರ್ತ ನಿಧಿಯ ಪ್ರಸ್ತಾವ ಇಲ್ಲ. ರೈತಪರ ಯಾವುದೇ ಹೊಸ ಯೋಜನೆಗಳಿಲ್ಲದ ನಿರಾಶಾದಾಯಕ ಬಜೆಟ್ ಎಂದು ಹೇಳಿದ್ದಾರೆ.
ತುಷ್ಟೀಕರಣದ ಬಜೆಟ್: ಶಿವನಗೌಡ ಟಿ. ಪಾಟೀಲ್
ಮುಖ್ಯಮಂತ್ರಿ ಸಿದ್ದರಾಮಯ್ಯನವರು 16ನೇ ಬಾರಿಗೆ ರಾಜ್ಯದ ಆಯವ್ಯಯವನ್ನು ಮಂಡಿಸಿದ್ದು ಜನತೆಯ ಎಲ್ಲಾ ನಿರೀಕ್ಷೆಗಳನ್ನು ಈ ಆಯವ್ಯಯ ಪೊಳ್ಳು ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಮಾರಕವಾಗುವಂತಹ ಬಜೆಟ್ ಅನ್ನು ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ಹೇಳಿದ್ದಾರೆ.
ರೈತರು, ಕೂಲಿಕಾರ್ಮಿಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿಲ್ಲ. ಕೇವಲ ಪ್ರಚಾರಕ್ಕಾಗಿ ಕೆಲವು ಕೋಟಿಗಳ ಹಣ ಬಿಡುಗಡೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಿದ್ದರಾಮಯ್ಯನವರ ಬಜೆಟ್
ಕರ್ನಾಟಕದ ಮಟ್ಟಿಗೆ ನಿರಾಶದಾಯಕ, ದೂರದೃಷ್ಟಿಯಿಲ್ಲದ ಬಜೆಟ್. ಬಹು ಸಂಖ್ಯಾತರಿಗೆ ಖಾಲಿ ಚೊಂಬು ಕೊಡುವುದನ್ನು ಈ ಬಜೆಟ್ನಲ್ಲೂ ಮುಂದುವರಿಸಿದ್ದಾರೆ. ಇದು ತುಷ್ಟೀಕರಣದ ಆಯವ್ಯಯ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.