SUDDIKSHANA KANNADA NEWS/ DAVANAGERE/ DATE:02-02-2025
ದಾವಣಗೆರೆ: ಸೀರೆ ಎಂದರೆ ಮಹಿಳೆಯರಿಗೆ ಇಷ್ಟವಾಗಲ್ವಾ. ಮದುವೆ, ಸಮಾರಂಭ, ಕಾರ್ಯಕ್ರಮಗಳು ಇದ್ದರೆ ಹೊಸ ಸೀರೆ ಖರೀದಿಸಲು ಪ್ರತಿಷ್ಟಿತ ಬಟ್ಟೆ ಅಂಗಡಿಗಳಿಗೆ ಹೋಗುತ್ತಾರೆ. ಆದ್ರೆ ಇಲ್ಲಿ ಸ್ವಲ್ಪ ಯಾಮಾರಿದರೆ ಪರ್ಸ್, ನಗದು, ಮೊಬೈಲ್ ಎಗರಿಸುವವರ ಸಂಖ್ಯೆ ಏನೂ ಕಡಿಮೆ ಏನಿಲ್ಲ. ಸೀರೆಗಳನ್ನೂ ಕಳ್ಳತನ ಮಾಡಿರುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.
ಅದೇ ರೀತಿಯಲ್ಲಿ ದಾವಣಗೆರೆಯಲ್ಲಿಯೂ ಇಂಥದ್ದೇ ಘಟನೆ ನಡೆದಿದೆ. ಅದೂ ಪ್ರತಿಷ್ಠಿತ ಬಟ್ಟೆ ಅಂಗಡಿಯಲ್ಲಿ. ನಂದಿನಿ ಎಂಬುವವರು ಹಳೇ ದಾವಣಗೆರೆಯ ಮಂಡಿಪೇಟೆಯಲ್ಲಿರುವ ಬಿ. ಎಸ್. ಚನ್ನಬಸಪ್ಪ ಅಂಗಡಿಗೆ ಸೀರೆ ಖರೀದಿಸಲು ಹೋಗಿದ್ದಾರೆ. ಈ ವೇಳೆ ಕೆಂಪು ವಸ್ತ್ರ ಹಾಗೂ ಜಾಕೆಟ್ ಧರಿಸಿ ಬಂದಿದ್ದ ಮಹಿಳೆಯೊಬ್ಬಳು ಗ್ರಾಹಕಿಯಂತೆ ಬಟ್ಟೆ ನೋಡಿದ್ದಾಳೆ.
ಈ ವೇಳೆ ನಂದಿನಿ ಅವರು ಬಟ್ಟೆ ನೋಡುವಲ್ಲಿ ಬ್ಯುಸಿ ಆಗಿದ್ದಾರೆ. ಆದ್ರೆ, ಖತರ್ನಾಕ್ ಲೇಡಿ ಮಾತ್ರ ಆಚೀಚೆ ನೋಡುತ್ತಾ ಟೇಬಲ್ ಮೇಲೆ ಇಟ್ಟಿದ್ದ ಪರ್ಸ್ ಕದ್ದು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪರ್ಸ್ ಕದ್ದ ಬಳಿಕ ಹೋಗುವಾಗ ಮಹಿಳೆಯು ಆಚೀಚೆ ನೋಡುತ್ತಾಳೆ. ಅಲ್ಲಿಲ್ಲಿ ಸಿಸಿಟಿವಿ ಏನಾದರೂ ಇದೆಯಾ ಎಂದುಕೊಂಡು ನೋಡಿದ್ದಾಳೆ. ಪರ್ಸ್ ಕದ್ದ ಬಳಿಕ ಗಾಬರಿಯಿಂದಲೇ ಕಾಲ್ಕಿತ್ತಿದ್ದಾಳೆ. ಕಾಳಿಕಾದೇವಿ ರಸ್ತೆಯ ಬಿಎಸ್ ಚನ್ನಬಸಪ್ಪ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಒಂದು ಸಾವಿರ, ಮೊಬೈಲ್ ಹಾಗೂ ದಾಖಲೆಗಳಿದ್ದ ಪರ್ಸ್ ಕದ್ದೊಯ್ಯಲಾಗಿದೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.