SUDDIKSHANA KANNADA NEWS/ DAVANAGERE/ DATE:15-02-2025
ದಾವಣಗೆರೆ: 41 ದಿನ ಕುರೀನ, ಕೋಳೀನ ಕುಯ್ಯಂಗಿಲ್ಲ.. ಎಣ್ಣೆನೂ ಮುಟ್ಟಂಗಿಲ್ಲ… ಇದು ದಾವಣಗೆರೆಯ ಹಳೇ ಕುಂದುವಾಡ ಗ್ರಾಮದಲ್ಲಿ ಪರಿಪಾಲಿಸುವ ಸಂಪ್ರದಾಯ.
ಆಕರ್ಷಕ ದೇಗುಲ, ವಿಶಾಲ ಆವರಣ ಹೊಂದಿರುವ ದೇವಸ್ಥಾನವನ್ನ ಸಂಪೂರ್ಣವಾಗಿ ಶಿಲೆಯಲ್ಲೇ ನಿರ್ಮಿಸಲಾಗಿದೆ, ಪಕ್ಕದಲ್ಲೇ ಬಸವೇಶ್ವರ ದೇವಸ್ಥಾನವನ್ನ ಅಚ್ಚುಕಟ್ಟಾಗಿ, ಸುಂದರವಾಗಿ ಕಟ್ಟಲಾಗಿದೆ, ಈ ಎರಡು ದೇಗುಲಗಳನ್ನ ಶಿಲ್ಪಿಗಳಾದ ತಮಿಳುನಾಡಿನ ಎಸ್ ವಡಿವೇಲು, ಕೆಆರ್ ಮಾರಿಯಪ್ಪನ್ ಕಟ್ಟಿಕೊಟ್ಟಿದ್ದಾರೆ.
ಗ್ರಾಮಸ್ಥರು, ದಾನಿಗಳಿಂದ ದೇಣಿಗೆ ಪಡೆದು ಗ್ರಾಮದ ಮುಖಂಡರು, ಯುವಕರ ಸತತ ಪರಿಶ್ರಮದಿಂದ ದೇವಸ್ಥಾನಗಳು ನಿರ್ಮಾಣಗೊಂಡಿವೆ. ಫೆಬ್ರವರಿ 16 ಮತ್ತು 17ರಂದು ಈ ಎರಡು ದೇವಸ್ಥಾನಗಳು ಅದ್ದೂರಿಯಾಗಿ ಉದ್ಘಾಟನೆಗೆ ಸಿದ್ದವಾಗಿದೆ, ಐದು ದಿನಗಳ ಕಾಲ ಇಡೀ ಗ್ರಾಮಸ್ಥರಿಗೆ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ಹಾಗೂ ಪೂರ್ವ ಗೋಧಾವರಿಯ ಪಂಡಿತರಿಂದ ದೇವ ಯಜ್ಞ, ವಿವಿಧ ಹೋಮಗಳ ಮೂಲಕ ದೇವರ ಪ್ರಾಣ ಪ್ರತಿಷ್ಟಾಪನೆ ಜರುಗಲಿವೆ, ಈ ಹಿನ್ನಲೆ ಗ್ರಾಮದಲ್ಲಿ 41 ದಿನಗಳ ಕಾಲ ಮದ್ಯ,ಮಾಂಸ ಮಾರಾಟ, ಸೇವನೆ ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು ಕಟ್ಟು ನಿಟ್ಟುನಿಟ್ಟಿನಿಂದ ಪಾಲನೆ ಮಾಡಲಾಗುತ್ತಿದೆ.
ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ಈಗಾಗಲೇ ಈ ಒಂದು ಅದ್ಭುತ ವಿಗ್ರಹ ಆಗಮಿಸಿದೆ, ಶ್ರೀ ಬಸವ ಆಂಜನೇಯ ಅಭಿವೃದ್ದಿ ಸಮಿತಿಯಿಂದ ಗ್ರಾಮದವರೇ ಹಣ ಹಾಕಿ ಶಿಲೆಯಲ್ಲೇ ಐದೂವರೆ ಕೋಟಿ ವೆಚ್ಚದಲ್ಲಿ ಶ್ರೀ ಆಂಜನೇಯ, ಶ್ರೀ ಬಸವೇಶ್ವರ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಹಾಗಾಗಿ, ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಜೊತೆಗೆ ಪ್ರತಿಯೊಬ್ಬರೂ ಸಹಕರಿಸುವುದು ವಿಶೇಷ.





