SUDDIKSHANA KANNADA NEWS/ DAVANAGERE/ DATE:09-01-2025
ಮುಂಬೈ: ಎಲ್ ಅಂಡ್ ಟಿ ಅಧ್ಯಕ್ಷರು ಭಾನುವಾರವೂ ಕೆಲಸ ಮಾಡಬೇಕು. ಪತ್ನಿಯ ಮುಖ ನೋಡಿಕೊಂಡು ಯಾಕೆ ಇರುತ್ತೀರಾ ಎಂಬ ಮಾತು ಆಡಿದ್ದಕ್ಕೆ ಬಾಲಿವುಡ್ ಬೆಡಗಿ ಹಾಗೂ ನಟಿ ದೀಪಿಕಾ ಪಡುಕೋಣೆ ಆಘಾತ ತಂದಿದೆ ಎಂದು ಹೇಳಿದ್ದಾರೆ.
ನೌಕರರು ವಾರದಲ್ಲಿ ಏಳು ದಿನ ಕೆಲಸ ಮಾಡಬೇಕು ಎಂಬ ಎಲ್ ಆ್ಯಂಡ್ ಟಿ ಅಧ್ಯಕ್ಷರ ಸಲಹೆಗೆ ದೀಪಿಕಾ ಪಡುಕೋಣೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಈ ಕಲ್ಪನೆಯು ಆಘಾತಕಾರಿ ಮತ್ತು ಕಾರ್ಯಸಾಧ್ಯವಲ್ಲ ಎಂದು ಎಂದು ಕಿಡಿಕಾರಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಉದ್ಯೋಗಿಗಳ ಕೆಲಸ-ಜೀವನದ ಸಮತೋಲನದ ಕುರಿತು ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ) ಅಧ್ಯಕ್ಷ ಎಸ್ಎನ್ ಸುಬ್ರಹ್ಮಣ್ಯನ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಯ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.
ನೌಕರರೊಂದಿಗಿನ ಸಭೆಯಲ್ಲಿ, ಸುಬ್ರಹ್ಮಣ್ಯನ್ ಅವರು ಯಶಸ್ವಿಯಾಗಲು ನೌಕರರು ವಾರದಲ್ಲಿ ಏಳು ದಿನ ಕೆಲಸ ಮಾಡಲು ಸಿದ್ಧರಿರಬೇಕು ಎಂದು ಸಲಹೆ ನೀಡಿದರು. ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಲು ದೀಪಿಕಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಧ್ಯಕ್ಷರ ಹೇಳಿಕೆಯು ಶಾಕ್ ತಂದಿದೆ ಎಂದಿದ್ದಾರೆ.
ಉನ್ನತ ಸ್ಥಾನದಲ್ಲಿರುವವರು ಇಂಥ ಹೇಳಿಕೆ ನೀಡಬಾರದು. ಹಿರಿಯ ಸ್ಥಾನದಲ್ಲಿರುವವರು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.
ಬಹುರಾಷ್ಟ್ರೀಯ ಸಂಸ್ಥೆಯಾದ ಲಾರ್ಸೆನ್ ಮತ್ತು ಟೂಬ್ರೊ ಅಧ್ಯಕ್ಷರು ಭಾನುವಾರವೂ ಸೇರಿದಂತೆ 90ಗಂಟೆಗಳ ಕೆಲಸ ಮಾಡಬೇಕು ಎಂದಿದ್ದರು. ವಾರವನ್ನು ಪ್ರತಿಪಾದಿಸಿದರು. “ಭಾನುವಾರದಂದು ಕೆಲಸ ಮಾಡಲು ಆಗದಿರುವುದಕ್ಕೆ ವಿಷಾದಿಸುತ್ತೇನೆ. ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನೀವು ನಿಮ್ಮ ಹೆಂಡತಿಯನ್ನು ಎಷ್ಟು ದಿನ ನೋಡುತ್ತೀರಿ? ಎಂದು ಉದ್ಯೋಗಿಗಳಿಗೆ ಎಲ್ ಅಂಡ್ ಡಿ ಮುಖ್ಯಸ್ಥರು ಹೇಳಿದ್ದರು.
ಎಸ್ ಎನ್ ಸುಬ್ರಹ್ಮಣ್ಯನ್ ಅವರ ಹೇಳಿಕೆಗೆ ಟೀಕೆ ವ್ಯಕ್ತವಾಗಿದೆ. ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು 2023 ರಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡುವಂತೆ ಹೇಳಿದ್ದರು.