SUDDIKSHANA KANNADA NEWS/ DAVANAGERE/ DATE:15-11-2024
ದಾವಣಗೆರೆ: ಮ್ಯಾಟ್ರಿಮೊನಿ ಮೂಲಕ ಹೆಣ್ಣು ಮಕ್ಕಳನ್ನು ಪರಿಚಯ ಮಾಡಿಕೊಂಡು ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಾಚಹಳ್ಳಿ ಗ್ರಾಮದ ಆರೋಪಿ ಮಾಧು ಅಲಿಯಾಸ್ ಮಧು ಎಂ. ಮಹದೇವಪ್ಪ (31) ಬಂಧಿತ ಆರೋಪಿ. ಬಂಧಿತನಿಂದ 1 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಇದುವರೆಗೆ ಆರೋಪಿತನು ವಿವಿಧ ಕಡೆಗಳಲ್ಲಿ 8 ಪ್ರಕರಣಗಳಲ್ಲಿ ಒಟ್ಟು 62,83,600 ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಕಳೆದ ಜೂನ್ 25ರಂದು ಪಿರ್ಯಾದಿ ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ಮೇ 4ರಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿರುವಾಗ ತನ್ನ ಮೊಬೈಲ್ ನಲ್ಲಿ ಕನ್ನಡ ಮ್ಯಾಟ್ರಿಮೋನಿಯಲ್ ಆಪ್ ನೋಡುತ್ತಿದ್ದೆ. ಆಗ ಈ ಆಪ್ ನಲ್ಲಿ ಅಪರಿಚಿತ ವ್ಯಕ್ತಿ ಮಧು ಎಂ ಮಹಾದೇವಪ್ಪ ಎಂಬಾತ ಪರಿಚಯವಾಗಿದ್ದಾನೆ. ನಂತರ ಆರೋಪಿಯು ಪಿರ್ಯಾದಿಯ ಮೊಬೈಲ್ ನಂಬರ್ ಗೆ ವಾಟ್ಸಪ್ ಮೂಲಕ ಮೆಸೆಜ್ ಮಾಡಿ ನನಗೆ ನಿಮ್ಮ ಪ್ರೊಫೈಲ್ ಇಷ್ಟವಾಗಿದ್ದು ನಾನು ನಿಮ್ಮನ್ನು ಮದುವೆ ಆಗಲು ಒಪ್ಪಿರುತ್ತೇನೆ ಎಂದು ಮೇಸೆಜ್ ಮಾಡಿದ್ದಾನೆ.
ಆರೋಪಿತನು ಪಿರ್ಯಾದಿಯ ಮೊಬೈಲ್ ನಂಬರ್ ಗೆ ಪ್ರತಿ ದಿನ ವಿವಿಧ ಮೊಬೈಲ್ ನಂಬರ್ ಗಳಿಂದ ವಾಟ್ಸಪ್ ಮಾಡುತ್ತಾ ಹಾಗೂ ಕಾಲ್ ಮಾಡಿ ಮಾತನಾಡುತ್ತಿದ್ದ. ವಿಧ್ಯಾಭ್ಯಾಸದ ಬಗ್ಗೆ ವಿಚಾರಿಸಿ ಮೈಸೂರು ನಗರದ ಆರ್ ಆರ್ ಬಿ ರೈಲ್ವೆ ಇಲಾಖೆಯಲ್ಲಿ ಕ್ಲೆರಿಕಲ್ ಪೋಸ್ಟ್ ಗಳು ಖಾಲಿ ಇದ್ದು, ನಾನು ರೈಲ್ವೆ ಇಲಾಖೆಯ ವರ್ಕಶಾಪ್ ನಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪಿರ್ಯಾದಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಪಿರ್ಯಾದಿಯಿಂದ ವಿವಿಧ ದಿನಾಂಕಗಳಂದು ಹಂತ ಹಂತವಾಗಿ ಒಟ್ಟು 21,03,600 ಹಣವನ್ನು ಆನ್ ಲೈನ್ ಮೂಲಕ ಹಾಕಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ವಂಚನೆಗೊಳಗಾದವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು, ‘
ಮ್ಯಾಟ್ರಿಮೊನಿ ಆಪ್ ಮೂಲಕ ಮದುವೆಯಾಗಿ ನಂಬಿಸಿ ಚಿಕ್ಕಮಗಳೂರು ಪೊಲೀಸ್ ಠಾಣೆ ಪ್ರಕರಣದಲ್ಲಿ ರೂ. 3,80,000 ರೂ., ಮಂಡ್ಯ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿನ ಪ್ರಕರಣದಲ್ಲಿ ರೂ. 26,00,000, ದಾವಣಗೆರೆ ಸಿಇಎನ್ ಪೊಲೀಸ್ ಠಾಣೆ ಪ್ರಕರಣದಲ್ಲಿ ರೂ. 21,03600 ವಂಚಿಸಿದ್ದ. ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಹಾಕಿಸಿಕೊಂಡಿದ್ದ. ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ಪ್ರಕರಣದಲ್ಲಿ1,50,000, ಹರಿಹರ ನಗರ ಪೊಲೀಸ್ ಠಾಣೆ- ಸಿ ಆರ್ ನಂ 142-20219 ಪ್ರಕರಣದಲ್ಲಿ ರೂ. 1,30,000, ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ಪ್ರಕರಣದಲ್ಲಿ ರೂ. 2,80,000, ಮೈಸೂರು ಸಿಇಎನ್ ಪೊಲೀಸ್ ಠಾಣೆ 35/2021 ಪ್ರಕರಣದಲ್ಲಿ ರೂ. 90,000, ಕೆ ಆರ್ ನಗರ ಪೊಲೀಸ್ ಠಾಣೆ ಪ್ರಕರಣದಲ್ಲಿ ರೂ. 5,50,000 ವಂಚನೆ ಮಾಡಿದ್ದ ಈ ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡು ಹಾಲಿ 4,01,463 ರೂಪಾಯಿಗಳನ್ನು ಪಿರ್ಯಾದಿದಾರರಿಗೆ ಮರುಪಾವತಿ ಮಾಡಿಸಲಾಗಿದೆ.
ಸದರಿ ಪ್ರಕರಣದ ಆರೋಪಿತನ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ, ಜಿ. ಮಂಜುನಾಥ, ಸಿಇಎನ್ ಠಾಣೆ ಪೊಲೀಸ್ ಉಪಾಧೀಕ್ಷಕಿ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಲಕ್ಷ್ಮಣ್ ನಾಯ್ಕ್ ನೇತೃತ್ವದಲ್ಲಿ ಸಿಬ್ಬಂದಿಯವರಾದ ಗೋವಿಂದರಾಜ್, ಅಶೋಕ, ಜಿಲ್ಲಾ ಪೊಲೀಸ್ ಕಛೇರಿಯ ರಾಮಚಂದ್ರ ಜಾಧವ್, ರಾಘವೇಂದ್ರ ಅವರ ತಂಡವು ಆರೋಪಿತ ಮಾಧು ಅಲಿಯಾಸ್ ಎಂಬಾತನನ್ನು ಬಂಧಿಸಿದೆ. ಈ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.