SUDDIKSHANA KANNADA NEWS/ DAVANAGERE/ DATE:26-10-2023
ಶಿವಮೊಗ್ಗ: ಭದ್ರಾವತಿ ರೈಲು ನಿಲ್ದಾಣದಿಂದ ಹೊರಟ ರೈಲುಗಾಡಿ 20651 ಕಿ.ಮೀ ನಂ 59/700-800 ರಲ್ಲಿ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯ ಮೇಲೆ ಹರಿದು, ವ್ಯಕ್ತಿ ಮೃತಪಟ್ಟಿದ್ದಾರೆ.
ಮೃತನು ಸುಮಾರು 4 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ 2 ಇಂಚು ಕಪ್ಪು ಕೂದಲು, ಅರ್ಧ ಇಂಚು ಕಪ್ಪು ಮೀಸೆ ಇರುತ್ತದೆ. ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಅದರ ಮೇಲೆ ಪ್ಲಸ್ ಆಕಾರದ ನೀಲಿ ಕಲರ್ನ ಗೆರೆ ಇರುತ್ತದೆ. ಬಿಳಿ ಬಣ್ಣದ ಕ್ರಾಸ್ ಬನಿಯನ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಶವವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶೈತ್ಯಾಗಾರದಲ್ಲಿ ಇರಿಸಲಾಗಿದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್, ದೂ.ಸಂ: 08182-222974, 9480802124 ನ್ನು ಸಂಪರ್ಕಿಸಬಹದು ಎಂದು ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.