SUDDIKSHANA KANNADA NEWS/ DAVANAGERE/ DATE:09-01-2025
ತಿರುಮಲ: ಆಂಧ್ರದ ತಿರುಪತಿಯ ವೈಕುಂಠ ದ್ವಾರ ದರ್ಶನ ಟಿಕೆಟ್ ಕೇಂದ್ರದ ಬಳಿ ಕಾಲ್ತುಳಿತ ಸಂಭವಿಸಿ ಮಹಿಳೆ ಸಾವು ಕಂಡ ಘಟನೆ ನಡೆದಿದೆ.
ಆಂಧ್ರದ ತಿರುಪತಿಯಲ್ಲಿ 10 ದಿನಗಳ ದರ್ಶನಕ್ಕೆ ಟಿಕೆಟ್ ನೀಡುವಾಗ ಕಾಲ್ತುಳಿತ ಸಂಭವಿಸಿ ಮಹಿಳೆ ಸಾವು ಕಂಡಿದ್ದಾರೆ. ಆದ್ರೆ ಮಹಿಳೆ ಎಲ್ಲಿಯವರು ಎಂಬುದು ಸ್ಪಷ್ಟವಾಗಿಲ್ಲ.
ಆಂಧ್ರಪ್ರದೇಶದ ತಿರುಮಲದ ತಿರುಪತಿಯಲ್ಲಿ ವೆಂಕಟರಮಣ ದೇವರ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ದೇಶದ ನಾನಾ ಮೂಲೆಗಳಿಂದ ಭಕ್ತರ ಪ್ರವಾಹವೇ ಹರಿದು ಬಂದಿದ್ದು, ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆ ಅಸುನೀಗಿದ್ದಾರೆ.