SUDDIKSHANA KANNADA NEWS/ DAVANAGERE/ DATE:19-03-2025
ದಾವಣಗೆರೆ: ಜಿಲ್ಲಾಧಿಕಾರಿ (District commissioner) ಗಂಗಾಧರ ಸ್ವಾಮಿ ಜಿ.ಎಂ. ಅವರು ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಹಾನಗರ ಪಾಲಿಕೆಯ ಕಾಮಗಾರಿ ಪರಿಶೀಲಿಸಿ, ಸ್ಥಳದಲ್ಲಿದ್ದ ಗುತ್ತಿಗೆದಾರನಿಗೆ ಕಾಮಗಾರಿಯ ನಿಧಾನಗತಿಯ ಬಗ್ಗೆ ಪ್ರಶ್ನಿಸಿ ಕಾಲಮಿತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿ, ತಪ್ಪಿದಲ್ಲಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ವಹಿಸಲು ಆಯುಕ್ತರಿಗೆ ಸೂಚಿಸಿದರು.
READ ALSO THIS STORY:ಆರುಂಡಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ: ಅಕ್ರಮ ಗಣಿಗಾರಿಕೆ, ಕ್ರಷರ್ ಸ್ಥಗಿತಕ್ಕೆ ಜಿ. ಬಿ. ವಿನಯ್ ಕುಮಾರ್ ಆಗ್ರಹ
ಉಪ ನೊಂದಣಾಧಿಕಾರಿಗಳ ಕಚೇರಿ, ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಕಾರ್ಮಿಕ ಇಲಾಖೆಗೆಳಿಗೆ ಭೇಟಿ ನೀಡಿ ಇಲ್ಲಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಶುಚಿತ್ವ ಕಾಪಾಡುವುದು, ಅನುಪಯುಕ್ತ ವಸ್ತುಗಳನ್ನು ನಿಯಮನುಸಾರ ಕೂಡಲೇ ವಿಲೆಪಡಿಸಲು ನಿರ್ದೇಶಿಸಿದರು.