Site icon Kannada News-suddikshana

ದಾವಣಗೆರೆ ಟು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ವೋಲ್ವೋ ಬಸ್ ಸೇವೆ: ಮಾರ್ಗದ ಡೀಟೈಲ್ಸ್

ದಾವಣಗೆರೆ

ದಾವಣಗೆರೆ: ಕೆಎಸ್‍ಆರ್ ಟಿಸಿ ದಾವಣಗೆರೆ ಬಸ್ ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಫ್ಲೈಬಸ್ (ವೋಲ್ವೋ) ಸೇವೆಯ ನೂತನ ಮಾರ್ಗಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

READ ALSO THIS STORY: ಐಟಿ ಬಿಟಿ ಹಬ್ ಆಗಲಿದೆ ದಾವಣಗೆರೆ: 60 ದಿನಗಳಲ್ಲಿ10ಕ್ಕಿಂತ ಹೆಚ್ಚು ಐಟಿ ಕಂಪನಿಗಳ ಆಗಮನದ ನಿರೀಕ್ಷೆ!
ದಾವಣಗೆರೆ ಕೆಎಸ್‍ಆರ್‍ಟಿಸಿಯಿಂದ ಬಸ್ ನಿಲ್ದಾಣದಲ್ಲಿ ನೂತನ ವೋಲ್ವೊ ಬಸ್‍ಗೆ ಅವರು ಚಾಲನೆ ನೀಡಿದರು.
ಮಾರ್ಗದ ಡೀಟೈಲ್ಸ್:

ದಾವಣಗೆರೆಯಿಂದ ಬೆಳಗ್ಗೆ 10 ಗಂಟೆಗೆ ಹೊರಡುವ ಈ ಬಸ್ ಚಿತ್ರದುರ್ಗ, ತುಮಕೂರು, ದಾಬಸ್‍ಪೇಟೆ ಮಾರ್ಗವಾಗಿ ಮಧ್ಯಾಹ್ನ 1 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ಹೊರಟು ರಾತ್ರಿ 10 ಗಂಟೆಗೆ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಹಾಗೆಯೇ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಧ್ಯರಾತ್ರಿ 12.45ಕ್ಕೆ ಹೊರಟು ಅದೇ ಮಾರ್ಗವಾಗಿ ಮುಂಜಾನೆ 5.45ಕ್ಕೆ ಹಾಗೂ ಬೆಳಗ್ಗೆ 10 ಗಂಟೆಗೆ ಹೊರಡುವ ಬಸ್ ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ಬಸ್ ನಿಲ್ದಾಣ ಸೇರಲಿರುವ ಬಸ್ ಇದೇ ಮಾರ್ಗವಾಗಿ ಪ್ರತಿನಿತ್ಯ ಸಂಚರಿಸಲಿದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತುಮಕೂರು ಬಸ್ ನಿಲ್ದಾಣಕ್ಕೆ ರೂ.400, ಚಿತ್ರದುರ್ಗಕ್ಕೆ ರೂ. 980 ಹಾಗೂ ದಾವಣಗೆರೆಗೆ 1250 ರೂ ದರ ನಿಗಧಿಪಡಿಸಲಾಗಿದೆ. ಅದಷ್ಟೇ ಅಲ್ಲದೇ ಪ್ರಯಾಣಿಕರ ಅನುಕೂಲಕ್ಕಾಗಿ ಚಿತ್ರದುರ್ಗ ಬೈಪಾಸ್ ಮತ್ತು ತುಮಕೂರು ಬೈಪಾಸ್ ಸೇರಿ ಎರಡು ಮಾರ್ಗದ ಮಧ್ಯೆ ಪಿಕಪ್ ಮತ್ತು ಡ್ರಾಪ್ ಪಾಯಿಂಟ್ ಸಹ ನೀಡಲಾಗಿದೆ. ಪ್ರಯಾಣಿಕರು ಕೆಎಸ್‍ಆರ್‍ಟಿಸಿ ಬಸ್ ಸೇವೆ ಪಡೆಯಲು ಸಂಸದರು ತಿಳಿಸಿದರು.

ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಡಿಸಿ ಶಿವಕುಮಾರಯ್ಯ, ಮಾರ್ಗ ನಿಯಂತ್ರಣಾಧಿಕಾರಿ ಫಕ್ರುದ್ದೀನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Exit mobile version