SUDDIKSHANA KANNADA NEWS/ DAVANAGERE/ DATE:17-10-2023
ದಾವಣಗೆರೆ (Davanagere): ಜೀವನದಲ್ಲಿ ಜಿಗುಪ್ಸೆಗೊಂಡು ಕುಸ್ತಿ ಪಟು 13 ವರ್ಷದ ಬಾಲಕಿ ಗರಡಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹರಿಹರ ಪಟ್ಟಣದ ಶಿಬಾರ ಸರ್ಕಲ್ ಸಮೀಪದ ಗರಡಿ ಮನೆಯಲ್ಲಿ ನಡೆದಿದೆ.
Read Also This Story:
ಭದ್ರಾ ಡ್ಯಾಂ (Bhadra Dam) ನೀರು ಹರಿಸುವ ಭರವಸೆ ಕೊಟ್ಟಿದ್ದರೂ ಆದೇಶ ಬಂದಿಲ್ಲ, ಮರ್ಮವೇನೂ ಗೊತ್ತಾಗ್ತಿಲ್ಲ: ಜಿ. ಎಂ. ಸಿದ್ದೇಶ್ವರ
ಕಾವ್ಯಾ ಪೂಜಾರ್ (13) ಆತ್ಮಹತ್ಯೆಗೆ ಶರಣಾದ ಬಾಲಕಿ. ಈಕೆ ಧಾರವಾಡ ಕುಸ್ತಿ ಹಾಸ್ಟೆಲ್ ನಲ್ಲಿದ್ದುಕೊಂಡು ಕುಸ್ತಿ ತರಬೇತಿ ಪಡೆಯುವುದರ ಜೊತೆಗೆ ವಿಧ್ಯಾಭ್ಯಾಸ ಮಾಡುತ್ತಿದ್ದಳು. ಕಳೆದ ಎರಡು ದಿನಗಳ ಹಿಂದೆ ಹರಿಹರಕ್ಕೆ ಬಂದಿದ್ದ
ಬಾಲಕಿ ಬೆಳಗ್ಗೆ ಶಿಬಾರ ಸರ್ಕಲ್ ಬಳಿ ಇರುವ ಗರಡಿ ಮನೆಯಲ್ಲಿ ತರಬೇತಿಗೆ ಹೋದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
13 ನೇ ವಯಸ್ಸಿಗೆ ಕುಸ್ತಿಯಲ್ಲಿ ಹಲವು ಪ್ರಶಸ್ತಿ ಗಳನ್ನು ಮುಡಿಗೇರಿಸಿಕೊಂಡಿದ್ದಳು. ಅಲ್ಲದೇ ದಸರಾ ಕ್ರೀಡಾಕೂಟಕ್ಕೂ ಸಹ ಭಾಗವಹಿಸಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು
ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಯಾವ ಕಾರಣಕ್ಕೆ ಅ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದು ಕೂಡ ತಿಳಿದು ಬಂದಿಲ್ಲ.
ಸದ್ಯ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುರಿಸಿದ್ದಾರೆ.