SUDDIKSHANA KANNADA NEWS/ DAVANAGERE/ DATE:23-10-2023
ದಾವಣಗೆರೆ (Davanagere): ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಹಿತದೃಷ್ಠಿಯಿಂದ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಅ.24 ರಂದು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂ. ವಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
Read Also This Story:
ಚಲುವ ಸಿನಿಮಾ ನಾಯಕಿಯ ಬದುಕಿನಲ್ಲಿ ಏಳು ಸುತ್ತಿನ ಕೋಟೆ ಕಟ್ಟಿದವರು ಯಾರು…? 25 ವರ್ಷದ ಬಿಜೆಪಿಗೆ ಗುಡ್ ಬೈ ಹೇಳಿದ್ಯಾಕೆ.. ರಾಜೀನಾಮೆ ಪತ್ರದಲ್ಲೇನು ಬರೆದಿದ್ದಾರೆ ಗೌತಮಿ (Gautami) ತಡಿಮಲ್ಲ….?
ಅಂದು ಬೆಳಗ್ಗೆ 6 ರಿಂದ ಸಂಜೆ 7 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಮತ್ತು ಸರಬರಾಜನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಡಾ.ವೆಂಕಟೇಶ ಎಂ.ವಿ ಆದೇಶಿಸಿದ್ದಾರೆ.
ರಿಯಾಯಿತಿ ದರದಲ್ಲಿ ಮಾರಾಟ:
ಲಿಡಕರ್ ನಿಗಮದ ವತಿಯಿಂದ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 18 ರವರೆಗೆ ಅಪ್ಪಟ ಚರ್ಮದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಹೊಸ ಮಾದರಿಯ ಅಪ್ಪಟ ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್, ವ್ಯಾನಿಟಿ ಬ್ಯಾಗ್ ಗಳು ಶೇ.20ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ಗ್ರಾಹಕರು ನಗರದ ಎ.ವಿ.ಕೆ ಕಾಲೇಜು ರಸ್ತೆಯಲ್ಲಿರುವ ಟೆನ್ನಿಸ್ ಕೋರ್ಟ್ ಹಿಂಭಾಗದಲ್ಲಿರುವ ಲಿಡಕರ್ ಲೆದರ್ ಎಂಪೋರಿಯಂ ಮಳಿಗೆಗೆ ಭೇಟಿ ನೀಡಿ ವಸ್ತುಗಳನ್ನು ಖರೀದಿಸಬಹುದು ಎಂದು ಲಿಡಕರ್ ನಿಗಮದ ಜಿಲ್ಲಾ ಸಂಯೋಜಕ ಹಾಗೂ ವ್ಯವಸ್ಥಾಪಕ ಗಂಗಾಧರ್ ತಿಳಿಸಿದ್ದಾರೆ.