SUDDIKSHANA KANNADA NEWS/ DAVANAGERE/ DATE:13-10-2023
ದಾವಣಗೆರೆ (Davanagere): ಬಸವರಾಜ ಪೇಟೆಯ ಯುವಕ ಪೃಥ್ವಿರಾಜ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೇನ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
Read Also This Story:
ಹಿಂದೂ ಮಹಾಗಣಪತಿ ವಿಸರ್ಜನೆಗೆ ಲಕ್ಷಾಂತರ ಜನರು: ದಾವಣಗೆರೆ (Davanagere) ಜಿಲ್ಲಾ ಪೊಲೀಸ್ ಇಲಾಖೆ ಕೊಟ್ಟಿರುವ ಕಟ್ಟುನಿಟ್ಟಿನ ಸೂಚನೆಗಳೇನು… ಎಚ್ಚರಿಕೆಗಳೇನು..?
ಶಿವರಾಜ್ ಎಂಬಾತನೇ ಕ್ರೇನ್ ಚಾಲಕ. ಈತನನ್ನು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಘಟನೆ ಸಂಬಂಧ 304ಎ ಸೇರಿದಂತೆ ಅಜಾಗರೂಕತೆ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ದಾವಣಗೆರೆ (Davanagere) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದಾವಣಗೆರೆ (Davanagere)ಯ ರೇಣುಕಾಮಂದಿರದ ಬಳಿ ಕೇಸರಿ ಬಾವುಟ ಕಟ್ಟುವ ವೇಳೆ ಕ್ರೇನ್ ತಲೆಮೇಲೆ ಹರಿದು ಪೃಥ್ವಿರಾಜ್ ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಕೇಸ್ ದಾಖಲಿಸಲಾಗಿದೆ. ಕ್ರೇನ್ ಚಾಲಕ ಶಿವರಾಜ್ ನನ್ನು ಅಂದೇ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.
ಕ್ರೇನ್ ನ ಚಕ್ರ ತಲೆಮೇಲೆ ಹರಿದು ಪೃಥ್ವಿರಾಜ್ ಮೃತಪಟ್ಟಿದ್ದರು. ಮಾತ್ರವಲ್ಲ, ಸಾವಿರಾರು ಜನರು ಕಂಬನಿ ಮಿಡಿದಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಪೃಥ್ವಿರಾಜ್ ಸಾವು ಕುಟುಂಬಸ್ಥರು, ಸ್ನೇಹಿತರು ಹಾಗೂ ಹಿಂದೂ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಸಂತಾಪ ಸೂಚಿಸಿದ್ದರು. ಅ. 14ರಂದು ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾಸಭಾ ಟ್ರಸ್ಟ್ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಕೇಸರಿ ಬಾವುಟ ಕಟ್ಟಲಾಗುತಿತ್ತು.