ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ದಾವಣಗೆರೆ ನಗರ ಬಂದ್”ಗೆ ಜೂನ್ 28ರಂದು ಕರೆ: ಶಾಲಾ ಕಾಲೇಜುಗಳಿಗಿಲ್ಲ ರಜೆ! ಏನೆಲ್ಲಾ ಸೂಚನೆಗಳ ಕೊಡಲಾಗಿದೆ?

On: June 28, 2025 11:35 AM
Follow Us:
ದಾವಣಗೆರೆ
---Advertisement---

SUDDIKSHANA KANNADA NEWS/ DAVANAGERE/ DATE-27-06-2025

ದಾವಣಗೆರೆ: ಬಿಜೆಪಿ ರೈತ ಮೋರ್ಚಾ ಹಾಗೂ ಜಿಲ್ಲಾ ರೈತ ಒಕ್ಕೂಟದ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಖಾಂತರ ನೀರು ಬಿಡಲು ಭದ್ರಾ ಬಲದಂಡೆ ನಾಲೆಗೆ ಪೈಪ್ ಲೇನ್ ಕಾಮಗಾರಿ ಮಾಡಲಾಗುತ್ತಿದೆ. ಕೂಡಲೇ ಕಾಮಗಾರಿ ನಿಲ್ಲಿಸಿ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಜೂನ್ 28ರಂದು ಬೆಳಿಗ್ಗೆ ಆರು ಗಂಟೆಯಿಂದ ದಾವಣಗೆರೆ ನಗರ ಬಂದ್ ಗೆ ಕರೆ ಕೊಡಲಾಗಿದೆ.

READ ALSO THIS STORY: ಚನ್ನಗಿರಿಯ ಮುದ್ದೇನಹಳ್ಳಿಯಲ್ಲೊಂದು ವಿಲಕ್ಷಣ ಕೇಸ್: ಪುತ್ರಿ ಜೊತೆ ಮದುವೆ ಮಾಡಿಸಿದ್ದ ಅತ್ತೆ ಜೊತೆ ಅಳಿಯ ಜೂಟ್!

ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಂದ್ ಕರೆ ನೀಡಿದ ಆಯೋಜಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ನೀಡಿದೆ.

ದಾವಣಗೆರೆ (DAVANAGERE) ಬಂದ್ ಆಯೋಜಕರಿಗೆ ಸೂಚನೆಗಳು:

  • ಬಂದ್ ಕರೆ ಸಂಬಂಧ ಘನ ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘನೆ ಮಾಡುವಂತಿಲ್ಲ
  • ಒತ್ತಾಯಪೂರ್ವಕವಾಗಿ ಅಥವಾ ಬಲವಂತವಾಗಿ ಯಾವುದೇ ಶಾಲಾ-ಕಾಲೇಜು, ಸರ್ಕಾರಿ, ಖಾಸಗಿ ಸಂಸ್ಥೇಗಳನ್ನು ಮತ್ತು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವಂತಿಲ್ಲ. ಒಂದು ವೇಳೆ ಪ್ರಯತ್ನಿಸಿದ್ದಲ್ಲಿ ಕಾನೂನು
    ರೀತ್ಯ ಕ್ರಮ ಜರುಗಿಸಲಾಗುವುದು.
  • ಬಂದ್ ಸಂಬಂಧ ಸಾರ್ವಜನಿಕರ ಜನ-ಜೀವನಕ್ಕೆ, ವಾಹನ ಮತ್ತು ಆಸ್ತಿ-ಪಾಸ್ತಿ ನಾಶ ಮಾಡುವಂತಿಲ್ಲ
  • ಯಾವುದೇ ರಸ್ತೆ ತಡೆಗೆ ಹಾಗೂ ವಾಹನ ಅಡ್ಡಗಟ್ಟುವುದಕ್ಕೆ ಅವಕಾಶ ಇಲ್ಲ ಮತ್ತು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವಂತಿಲ್ಲ. ಒಂದು ವೇಳೆ ಪ್ರಯತ್ನಿಸಿದ್ದಲ್ಲಿ ಕಾನೂನು ರೀತ್ಯ ಕ್ರಮವಹಿಸಲಾಗುವುದು.ಯಾವುದೇ ಕಾರಣಕ್ಕೂ ತುರ್ತು ಸೇವೆಗಳಿಗೆ ಮತ್ತು ಅಗತ್ಯ ವಸ್ತುಗಳ ಸಾಗಾಣಿಕೆ ಅಡ್ಡಿಪಡಿಸುವಂತಿಲ್ಲ.
  • ಬಂದ್ ಸಂಬಂಧ ರಸ್ತೆ / ಸಾರ್ವಜನಿಕ ಸ್ಥಳಗಳಲ್ಲಿ ಟಯರ್ಗಳನ್ನು ಹಾಕಿ ಹಚ್ಚಲು ಮತ್ತು ಯಾವುದೇ ಪ್ರತಿಕೃತಿಗಳನ್ನು ದಹನ ಮಾಡಲು ಅವಕಾಶವಿಲ್ಲ.
  • ಬಂದ್ ಹೆಸರಿನಲ್ಲಿ ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಂಡರೆ ಅವರ ವಿರುದ್ಧ ಪೊಲೀಸ್ ಇಲಾಖೆ ಕಾನೂನು ರೀತ್ಯ ಕ್ರಮ ಜರುಗಿಸಲಿದೆ.
  • ಬಂದ್ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪೋಸ್ಟ್ ಗಳನ್ನು ಹಾಕುವುದಾಗಲೀ ಹಾಗು ಶೇರ್ ಮಾಡುವುದಾಗಲೀ ಕಂಡು ಬಂದರೆ
    ಸೂಕ್ತ ಕಾನೂನು ಕ್ರಮ ಕೈಗೊಳ್ಳಾಲಾಗುವುದು.
  • ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಶಾಂತಿಯುತವಾಗಿ ಹಾಗೂ ಸೌಹಾರ್ಧಯುತವಾಗಿ ಪ್ರತಿಭಟನೆ ನಡೆಸುವುದು, ಯಾವುದೇ ಅಹಿತಕರ ಘಟನೆಗಳು ಕಂಡುಬಂದರೆ ತುರ್ತು ಸಹಾಯವಣಿ 112 ಗೆ ಕರೆ ಮಾಡುವುದು.
    ಸ್ಥಳೀಯ ಪೊಲೀಸ್ ಠಾಣೆ/ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು.

READ ALSO THIS STORY: Bhadra Dam ಜ್ವಾಲೆ ಕಿಚ್ಚು: ಜನರಿಗೆ ತಪ್ಪು ಮಾಹಿತಿ ನೀಡಿಕೆ ವಿರೋಧಿಸಿ ಜೂ. 28ಕ್ಕೆ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ!

ದಾವಣಗೆರೆ ಬಂದ್ ಸಂಬಂಧ ಮುನ್ನೇಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ವತಿಯಿಂದ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಸಶಸ್ತ್ರ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment