SUDDIKSHANA KANNADA NEWS/ DAVANAGERE/ DATE:18-10-2023
ದಾವಣಗೆರೆ (Davanagere): ಪ್ರಸಕ್ತ ಸಾಲಿಗೆ ಜಿಲ್ಲೆಯ ವಿವಿಧ ನಿಗಮಗಳಲ್ಲಿ ಸಾಲ-ಸೌಲಭ್ಯ ಪಡೆಯಲು ಆನ್ ಲೈನ್ ಮೂಲಕ ಅರ್ಜಿಗಳ ಆಹ್ವಾನಿಸಲಾಗಿದೆ.
Read Also This Story:
M. P. Renukacharya: ಹಲವು ನಾಯಕರು ಬಿಜೆಪಿ ಪಕ್ಷ ಬಿಡ್ತಾರೆ: ಎಂ. ಪಿ. ರೇಣುಕಾಚಾರ್ಯ ಈ ಹೇಳಿಕೆ ಮರ್ಮವೇನು..? ಬ್ಲಾಕ್ ಮೇಲ್ ತಂತ್ರನಾ…?
ಈ ನಿಗಮಗಳಲ್ಲಿ ವಿಕಲಚೇತನರಿಗೆ ಮೀಸಲಿರಿಸಿದ ಶೇ.5ರ ಅನುದಾನದಡಿಯಲ್ಲಿ ವಿಕಲಚೇತನ ಫಲಾನುಭವಿ ಆಧಾರಿತ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬಹುದು. ಆನ್‍ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ಅ.30 ಕೊನೆಯದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕುರುಬರ ಹಾಸ್ಟೆಲ್ ಕಟ್ಟಡ, ಹದಡಿ ರಸ್ತೆ, ಜಯದೇವ ಸರ್ಕಲ್ ಹತ್ತಿರ, ದೂ.ಸಂ: 08192-230934 ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ. ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.