SUDDIKSHANA KANNADA NEWS/ DAVANAGERE/ DATE:08-03-2025
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್, ಡಿ ಬಾಸ್ ದರ್ಶನ್ ತೂಗುದೀಪ ಅವರಿಗೆ ಕೋಟ್ಯಂತರ ಫ್ಯಾನ್ಸ್ ಇದ್ದಾರೆ. ಮಹಿಳಾ ಅಭಿಮಾನಿಗಳಿಗೆ ಏನೂ ಕಡಿಮೆ ಇಲ್ಲ. ದರ್ಶನ್ ಎಲ್ಲೇ ಹೋದರೂ ಜನಜಂಗುಳಿ, ಅಭಿಮಾನಿಗಳ ದಂಡೇ ನೆರೆದಿರುತ್ತದೆ. ಪೊಲೀಸರು ನಿಯಂತ್ರಿಸುವಲ್ಲಿ ಸಾಕು ಸಾಕಾಗಿ ಹೋಗ್ತಾರೆ. ಆದ್ರೆ, ಮಹಿಳಾ ಅಭಿಮಾನಿಯ ಅತಿರೇಕ ವರ್ತನೆಗೆ ದರ್ಶನ್ ತೂಗುದೀಪ ಓಡಿ ಹೋದ ಘಟನೆ ನಡೆದಿದ್ದು, ವಿಡಿಯೋ ಸಖತ್ತಾಗಿಯೇ ವೈರಲ್ ಆಗಿದೆ.
ಈ ಬಾರಿ ಬರ್ತ್ ಡೇ ಅನ್ನು ಫ್ಯಾನ್ಸ್ ಜೊತೆ ದರ್ಶನ್ ತೂಗುದೀಪ ಆಚರಿಸಿಕೊಂಡಿಲ್ಲ. ಜಾಮೀನಿನ ಮೇಲೆ ಹೊರ ಬಂದ ಬಳಿಕ ಆರೋಗ್ಯದಲ್ಲಿ ಏರುಪೇರಾದ ಕಾರಣ ಸಿಂಪಲ್ ಆಗಿ ಸೆಲಬ್ರೆಟ್ ಮಾಡಿಕೊಂಡ್ರು. ಆದ್ರೆ, ದರ್ಶನ್ ನೋಡಬೇಕೆಂಬ
ಅಭಿಮಾನಿಗಳ ಆಸೆ ಏನೂ ಕಡಿಮೆ ಆಗಿಲ್ಲ.
ಬೆಂಗಳೂರಿನ ದರ್ಶನ್ ಮನೆ ಮುಂದೆ ಮಹಿಳಾ ಅಭಿಮಾನಿ ಗೋಳಾಟ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ದರ್ಶನ್ ಅವರು ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜಾಮೀನು ಸಿಕ್ಕ ಬಳಿಕ ವಿಡಿಯೋ ಮೂಲಕ ಫ್ಯಾನ್ಸ್ಗೆ ಮೆಸೇಜ್ ಕೊಟ್ಟಿದ್ದರು. ಬೆನ್ನು ನೋವು ಇದ್ದ ಕಾರಣ ಈ ಬಾರಿ ಬರ್ತ್ಡೇ ಆಚರಿಸಿಲ್ಲ ಎಂದು. ಬರ್ತ್ಡೇ ಇರಲಿ, ಇರದೇ ಇರಲಿ ದರ್ಶನ್ ಮನೆ ಮುಂದೆ ಫ್ಯಾನ್ಸ್ ಇದ್ದೆ ಇರ್ತಾರೆ. ಹಾಗಾಗಿ, ಅಭಿಮಾನಿಗಳು ಅತಿರೇಕ ವರ್ತನೆ ತೋರಬಾರದು ಎಂದು ಡಿ ಫ್ಯಾನ್ಸ್ ಮನವಿ ಮಾಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ದರ್ಶನ್ ನಿವಾಸದ ಮುಂದೆ ಅಭಿಮಾನಿಗಳು ಸೇರಿದ್ದರು ಎನ್ನಲಾಗಿದೆ. ಮಹಿಳಾ ಅಭಿಮಾನಿ ಕೂಡ ಇದ್ದರು. ಅವರೊಂದಿಗೆ ಮಾತಾಡ ಬೇಕು ಅಂತ ಆ ಮಹಿಳಾ ಅಭಿಮಾನಿ ಹಠ ಹಿಡಿದಿದ್ದರು. ಮೊದಲಿಗೆ ದರ್ಶನ್ ಮಾತನಾಡಿದರೂ, ಮತ್ತೆ ಮಹಿಳಾ ಅಭಿಮಾನಿ ಹಟ ಹಿಡಿದಿದ್ದಾರೆ.
ದರ್ಶನ್ ಅವರು ಅವರನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಬೆನ್ನು ಹಿಡಿದುಕೊಂಡೇ ಹೋಗಿ ಕಾರು ಹತ್ತಿದ್ದರು. ಆದರೂ ಕಾರಿನ ಬಳಿ ಮಹಿಳೆ ಗೋಳಾಡಿದ್ದಾರೆ. ಅಲ್ಲಿಂದ ದರ್ಶನ್ ತಪ್ಪಿಸಿಕೊಂಡು ಓಡುವ ದೃಶ್ಯವೂ ಇದೆ. ಕಾರಿನಲ್ಲಿ ಕೂತು ಬೆನ್ನು ನೋವು ಬಿಟ್ಟು ಬಿಡಮ್ಮ ಎಂದರೂ ಆ ಮಹಿಳಾ ಅಭಿಮಾನಿ ದರ್ಶನ್ ಅನ್ನು ಬಿಡಲಿಲ್ಲ. ಬಳಿಕ ಮತ್ತೆ ದರ್ಶನ್ ಅವರು ಕಾರಿನಿಂದ ಇಳಿದು ಮಹಿಳೆಯನ್ನು ಸಮಾಧಾನ ಮಾಡಿ ಹೋಗಿದ್ದಾರೆ. ಇದು ಎಷ್ಟರ ಮಟ್ಟಿಗೆ ಬಾಸ್ ಗೆ ಫ್ಯಾನ್ಸ್ ಇದ್ದಾರೆ ಎಂಬುದು ಗೊತ್ತಾಗುತ್ತದೆ ಎನ್ನುತ್ತಾರೆ ಅಭಿಮಾನಿಗಳು.