SUDDIKSHANA KANNADA NEWS/ DAVANAGERE/ DATE:02-03-2025
ದಾವಣಗೆರೆ: ಡಿಸೆಂಬರ್ ಒಳಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ವಿ. ಬಸವರಾಜ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪವರ್ ಶೇರಿಂಗ್ ಚರ್ಚೆ ಜೋರಾಗಿರುವ ಬೆನ್ನಲ್ಲಿಯೇ ಈ ಹೇಳಿಕೆ ನೀಡಿರುವುದು ಮಹತ್ವ ಬಂದಿದೆ.
ರಕ್ತದಲ್ಲಿ ಬೇಕಾದರೆ ಬರೆದುಕೊಡುತ್ತೇನೆ. ಡಿಸೆಂಬರ್ ಒಳಗೆ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತ. ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಸಾಕಷ್ಟು ದುಡಿದಿದ್ದಾರೆ. 80 ಶಾಸಕರು ಗೆಲ್ಲಲು ಡಿಕೆ ಶಿವಕುಮಾರ್ ಅವರ ಪಾತ್ರ ಇದೆ. ಅವರು ಏನೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.
ಈ ವರ್ಷದ ಡಿಸೆಂಬರ್ ನಿಂದ ಮುಂದಿನ 5 ವರ್ಷ ಅವರೆ ಮುಖ್ಯಮಂತ್ರಿ ಆಗಿರುತ್ತಾರೆ. ಅಂದರೆ ಏಳುವರೆ ವರ್ಷ ಅವರೇ ಸಿಎಂ ಆಗಿಯೇ ಮುಂದುವರಿಯುತ್ತಾರೆ ಎಂದು ಭವಿಷ್ಯ ನುಡಿದರು.
ಸಚಿವ ಕೆ. ಎನ್. ರಾಜಣ್ಣ ಹೇಳಿಕೆಯಿಂದ ಪಕ್ಷಕ್ಕೆ, ಸರ್ಕಾರಕ್ಕೆ ಭಾರೀ ಮುಜುಗರ ಆಗ್ತಿದೆ. ಹೈಕಮಾಂಡ್ ಇದನ್ನ ಗಮನಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳುವ ಮೂಲಕ ಶಿವಗಂಗಾ ಬಸವರಾಜ್ ರಾಜಣ್ಣರಿಗೆ ಟಾಂಗ್ ನೀಡಿದರು.